ಮಂಡ್ಯ

ಪಶು ಕಳೆದುಕೊಂಡ 37ಮಂದಿ ಪಲಾನುಭವಿಗಳಿಗೆ ರಾಸು ವಿಮೆಯೋಜನೆಯಡಿ ಚೆಕ್ ವಿತರಣಾ ಕಾರ್ಯಕ್ರಮ..!

Published

on

ಮಳವಳ್ಳಿ: ಬೇಕರಿಯಲ್ಲಿ ಸಿಗುವ ಎಲ್ಲಾ ಪದಾರ್ಥಗಳು ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾ ಮಂಡಳಿ (ಕೆ.ಎಂ.ಎಫ್) ನಿಂದ ತಯಾರಿಸಿ ಮಾರುಕಟ್ಟೆಗೆ ಬಿಡುವ ಚಿಂತನೆ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾ ಮಂಡಳಿ (ಕೆ.ಎಂ.ಎಫ್) ನಿರ್ದೇಶಕ ವಡ್ಡರಹಳ್ಳಿ ವಿಶ್ವನಾಥ್ ತಿಳಿಸಿದರು. ಮಳವಳ್ಳಿ ಪಟ್ಟಣದ ಎಸ್ ಸಿಡಿಎಲ್ ಕಾಂಪ್ಲೆಕ್ಸ್ ನಲ್ಲಿರುವ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಉಪಕಚೇರಿ ವತಿಯಿಂದ. ರಾಸು ವಿಮೆಯೋಜನೆಯಡಿ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಪಶು ಕಳೆದುಕೊಂಡ 37ಮಂದಿ ಪಲಾನುಭವಿಗಳಿಗೆ ಒಟ್ಟು 12 ಲಕ್ಷ ರೂ ಗಳ ಚೆಕ್ ವಿತರಿಸಿ ಮಾತನಾಡಿ,ಕೋವಿಡ್ 19 ಎಂಬ ಮಹಾಮಾರಿಯಿಂದ ರಾಜ್ಯದಲ್ಲಿ ರಾಜ್ಯ ಹಾಲು ಉತ್ಪಾದಕರ ಮಹಾ ಮಂಡಳಿ (ಕೆ.ಎಂ.ಎಫ್) ಸಾಕಷ್ಟು ನಷ್ಠದಲ್ಲಿ ಇದಕ್ಕೆ ಕಾರಣ ನಂದಿನಿಯ ಎಲ್ಲಾ ಉತ್ಪಾದನೆಗಳು ಮಾರಾಟ ವಾಗದೆ ಇರುವುದು ಅದಕ್ಕಾಗಿ ಪ್ರತಿ ಹಾಲು ಹಾಕುವವರು ನಂದಿನಿ ಪದಾರ್ಥಗಳ ಕೊಂಡುಕೊಳ್ಳುವಂತೆ ಮನವಿ ಮಾಡಿಕೊಂಡರು. ಪ್ರತಿಯೊಬ್ಬ ರೈತರು ಹೈನುಗಾರಿಕೆಗೆ ಒತ್ತುನೀಡಿ ಆರ್ಥಿಕವಾಗಿ ಮುಂದೆ ಬನ್ನಿ ಎಂದು ಕರೆನೀಡಿದರು. ಇದಲ್ಲದೆ ಗುಣಮಟ್ಟದ ಹಾಲುಗಳನ್ನು ನೀಡಬೇಕು ವಿಮೆ ಒಬ್ಬರಿಗೆ 30 ಸಾವಿರ ರೂ 40 ಸಾವಿರರೂ ಬರುತ್ತದೆ ಈ ಹಣವನ್ನು ಬೇರೆದಕ್ಕೆ ಬಳಸದೆ ಮತ್ತೊಂದು ಹಸು ಕೊಂಡುಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಕಚೇರಿ ಪ್ರಭಾರ ವ್ಯವಸ್ಥಾಪಕ ನೂತನ್ ಕುಮಾರ್ , ಪಶು ವೈದ್ಯರಾದ ಡಾ.ಕಿರಣ್ ಕುಮಾರ್, ಮಹದೇವಸ್ವಾಮಿ, ತೇಜಸ್ಸಿನಿ, ಲೀಲಾವತಿ, ಮಧುಶಂಕರ್ ಸೇರಿದಂತೆ ಮತ್ತಿತ್ತರರು ಉಪಸ್ಥೀತರಿದ್ದರು.

ವರದಿ- ಎ. ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version