Uncategorized

ಎನ್ ಆರ್ ಇ ಜಿ ಯೋಜನೆಯಲ್ಲಿ ಯಂತ್ರ ಬಳಕೆ:ಹಣ ದುರುಪಯೋಗ ಗ್ರಾಮಸ್ಥರ ಆರೋಪ..!

Published

on

ಕೂಲಿ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ನೀಡಬೇಕಾದ ಅಧಿಕಾರಿಗಳೇ ಜೆಸಿಬಿ ಯಂತ್ರದ ಮೂಲಕ ಕೆಲಸ ನಿರ್ವಹಿಸಿ ಸರ್ಕಾರದ ಹಣ ದುರುಪಯೋಗ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಬಯ್ಯಾಪುರ ಗ್ರಾಪಂ.ವ್ಯಾಪ್ತಿಯ ಸಜ್ಜಲಗುಡ್ಡ ದ ಸರ್ಕಾರಿ ಪ್ರೌಢ ಶಾಲೆಯಲ್ಲಿ 2.50 ಲಕ್ಷ ರೂ.ವೆಚ್ಚದಲ್ಲಿ ಖಾತ್ರಿ ಯೋಜನೆ ಅಡಿ ಮಳೆ ನೀರು ಕೊಯಿಲು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಈ ಕಾಮಗಾರಿ ನಿರ್ಮಾಣಕ್ಕೆ ಕೂಲಿ ಕಾರ್ಮಿಕರನ್ನು ಬಳಸದೇ ರಾತ್ರೋರಾತ್ರಿ ಜೆಸಿಬಿ ಯಂತ್ರದ ಮೂಲಕ ಗುಂಡಿ ತೋಡಿ ಸುಮಾರು 46,200 ರೂ. ಬೇನಾಮಿ ಕಾರ್ಮಿಕರ ಹೆಸರಿನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗಿದೆ ಎಂಬುದು ಕೂಲಿ ಕಾರ್ಮಿಕರ ಆರೋಪವಾಗಿದೆ. ಬೇನಾಮಿ ಕಾರ್ಮಿಕರ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿ ಕೊಡುವಂತೆ ಅಧಿಕಾರಿಗಳು ದುಂಬಾಲು ಬಿದ್ದಿದ್ದರಿಂದ ಅಧಿಕಾರಿಗಳ ಅಕ್ರಮದ ಸತ್ಯ ಬಯಲಿಗೆ ಬಂದಿದೆ. ಇನ್ನೂ ಕಟ್ಟಣ ನಿಮಾಣ ಮಾಡದೇ ಅರ್ಧಕ್ಕೆ ಬಿಡಲಾಗಿದ್ದು ಇನ್ನೂಳಿದ ಹಣವನ್ನು ಲಪಟಾಯಿಸಲು ಮುಂದಗಿದ್ದಾರೆ.ಮತ್ತು ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ ಹಾರಿಕೆ ಉತ್ತರ ನೀಡುತಿದ್ದಾರೆ ಎಂದು ಗ್ರಾಮೀಣ ಕೂಲಿ ಕಾರ್ಮಿಕ ಸಂಘ (ಗ್ರಾಕೂಸ್)ದ ಕಾರ್ಮಿಕರಾದ ಹನುಮಂತ, ಬಸವರಾಜ ಮುದಗಲ್, ಶರಣಬಸವ, ಕನಕಪ್ಪ, ನೂರಂದಪ್ಪ ಗುರಿಕಾರ, ಆದಪ್ಪ ಇಲಕಲ್ ಆರೋಪಿಸಿದ್ದಾರೆ.ಕೂಲಿ ಕಾರ್ಮಿಕರಿಗೆ ಕೆಲಸ ಕೊಡದೆ ಗ್ರಾಪಂ.ಅಧಿಕಾರಿಗಳು ಜೆಸಿಬಿ ಯಂತ್ರ ಬಳಸಿ ಮಳೆ ನೀರು ಕೊಯಿಲು ಕಾಮಗಾರಿ ಮಾಡಿ ಲಕ್ಷಾಂತರ ಹಣ ಲಪಟಾಯಿಸಲು ಮುಂದಾಗಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು.ಕ್ರಮ ಕೈಗೊಳ್ಳದೇ ಹೋದರೆ ದಾಖಲೆಗಳ ಸಮೇತ ತಾ.ಪಂ.ಮುಂದೆ ಧರಣಿ ಮಾಡುವದಾಗಿ ಗ್ರಾಮಸ್ಥರು ಹೇಳಿದ್ದಾರೆ.ಇದೇ ವೇಳೆ ಈರಪ್ಪ ಕೆಲ್ಲೂರು,ದೊಡ್ಡಪ್ಪ ರೇವಡಿಹಾಳ, ಮುತ್ತಣ್ಣ ಗುರಿಕಾರ, ವೀರಭದ್ರಪ್ಪ ಉಪಸ್ಥಿತರಿದ್ದರು.

ವರದಿ-ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು.

Click to comment

Trending

Exit mobile version