ರಾಯಚೂರು

ಭಾರಿ ಮಳೆಗೆ ಬೆಳೆ ಕಳೆದುಕೊಂಡ ರೈತರಿಗೆ ಆಸರೆಯಾಗಬೇಕಿದೆ ಸರ್ಕಾರ..!

Published

on

ರಾಯಚೂರು :- ಶುಕ್ರವಾರ ಇಡೀ ರಾತ್ರಿ ಸುರಿದ ಭಾರಿ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿದು ರೈತರ ಜಮೀನುಗಳಿಗೆ ನುಗ್ಗಿ ನೂರಾರು ಎಕರೆ ಬೇಳೆ ನೀರಿನಲ್ಲಿ ಕೊಚ್ಚಿಹೋದ ಘಟನೆ ಹೊಸ ಬುರ್ದಿಪಾಡ ಗ್ರಾಮದಲ್ಲಿ ನಡೆದಿದೆ. ರಾತ್ರಿಯಿಡಿ ಸುರಿದ ಮಳೆಗೆ ರಾಯಚೂರು ತಾಲ್ಲೂಕಿನ ಹಲವು ಹಳ್ಳಿಗಳು ಸಂಪರ್ಕ ಕಳೆದುಕೊಂಡಿದ್ರೆ ನೂರಾರು ಎಕರೆ ಬೆಳೆ ಸರ್ವನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರಂಭದಲ್ಲಿ ಉತ್ತಮ ಮಳೆಯಾಗಿ ಬೆಳೆಯು ಉತ್ತಮ ಫಸಲಿನಿಂದ ಸಾಕಷ್ಟು ಲಾಭ ಗಳಿಸುವ ಕನಸು ಕಂಡಿದ್ದ ರೈತರಿಗೆ ವರುಣಾರ್ಭಟಕ್ಕೆ ಕಂಗಾಲಾಗಿದ್ದಾನೆ. ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಗ್ರಾಮಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದ್ದವು. ನಿನ್ನೆ ರಾತ್ರಿಯೂ ಸುರಿದ ಮಳೆಗೆ ರಾಯಚೂರು ತಾಲ್ಲೂಕಿನ ಹೊಸಾ ಬುರ್ದಿಪಾಡ ಗ್ರಾಮದ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿ ಕೈಗೆ ಬಂದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಬೆಳೆ ಕಳೆಸುಕೊಂಡ ರೈತರು ಸಂಕಷ್ಟದಲದಲಿದ್ದು ಸರಕಾರ ತಮ್ಮ ಸಹಕಾರಕ್ಕೆ ಬರಿತ್ತದೆ ಡಂಬ ನಿರೀಕ್ಷೆಯಲ್ಲಿದ್ದಾರೆ. ಅಂತೆಯೇ ಸರಕಾರ ರೈತರ ನೆರವಿಗೆ ಕೂಡಲೆ ಧಾವಿಸಿ ಪರಿಹಾಕಕ್ಕಾಗಿ ಸೂಕ್ತ ಕ್ರಮ ವಹಿಸಬೇಕಿದೆ.

ವರದಿ-ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು..

Click to comment

Trending

Exit mobile version