ಮಂಡ್ಯ

ಸಂತೆ ಮೈದಾನದಲ್ಲಿ ಆಕ್ರಮವಾಗಿ ಇರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಪ್ರತಿಭಟನೆ…!

Published

on

ಮಳವಳ್ಳಿ: ಕಿರುಗಾವಲು ಸಂತೆ ಮೈದಾನದಲ್ಲಿ ಅಕ್ರಮವಾಗಿ ಹಾಕಿಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಹಾಗೂ ಗ್ರಾಮಸ್ಥರು ಮಳವಳ್ಳಿ ತಾಲ್ಲೂಕು ಕಿರುಗಾವಲು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.ಜಿ.ಪಂ ಸದಸ್ಯೆ ಸುಜಾತಪುಟ್ಟು ನೇತೃತ್ವದಲ್ಲಿ ಆಡಳಿತಾಧಿಕಾರಿ ವಿರುದ್ದ ಘೋಷಣೆ ಕೂಗಿದರು. ಇನ್ನೂ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದೇವರಾಜು ಮಾತನಾಡಿ, ಕಳೆದ ಗ್ರಾಮಪಂಚಾಯಿತಿ ಆಡಳಿತದಲ್ಲಿ ಗ್ರಾಮಪಂಚಾಯಿತಿಯಲ್ಲಿ ಯಾವುದೇ ಪೆಟ್ಟಿಅಂಗಡಿಗೆ ಅನುಮತಿ ನೀಡಬಾರದು ಎಂದು ನಿರ್ಣಯ ಮಾಡಿದ್ದರೂ, ಆಡಳಿತಾಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ನಿರ್ಣಯವನ್ನು ತಿರುಚಿದ್ದು, ಪೆಟ್ಟಿಅಂಗಡಿ ನೀಡಲು ಅನುಮತಿ ನೀಡಿದ್ದಾರೆ.ಕೂಡಲೇ ತೆರವುಗೊಳಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಸಿದರು.ಇನ್ನೂ ಆಡಳಿತಾಧಿಕಾರಿ ಹಾಗೂ ತಾ.ಪಂ ಇಓ ಸತೀಸ್ ರವರು ಗ್ರಾಮ ಪಂಚಾಯಿತಿಯಿಂದ ಅಂಗಡಿಗೆ ಅನುಮತಿ ನೀಡಿಲ್ಲ.ಆದರೂ ಅಂಗಡಿಗಳನ್ನು ಹಾಕಿಕೊಂಡಿದ್ದು. ಕೂಡಲೇ ತೆರವುಗೊಳಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್ಸು ಪಡೆದರು. ಪ್ರತಿಭಟನೆಯಲ್ಲಿ ಜಿ.ಪಂ ಸದಸ್ಯೆ ಸುಜಾತಪುಟ್ಟು,ನರೇಂದ್ರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದೇವರಾಜು, ಗ್ರಾ.ಪಂ ಮಾಜಿ ಸದಸ್ಯ ಮಹದೇವ,ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ- ಎ.ಎನ್ ಲೋಕೇಶ್ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version