ಹುಬ್ಬಳ್ಳಿ-ಧಾರವಾಡ

ರಾಜ್ಯದ ಬಿಜೆಪಿ ಸರ್ಕಾರ, ಭ್ರಷ್ಟಾಚಾರ ಮಾಡುತ್ತಾ ದಿವಾಳಿ ಹಂತಕ್ಕೆ ತಲುಪಿದೆ- ಬಸವರಾಜ ರಾಯರೆಡ್ಡಿ..!

Published

on

ಹುಬ್ಬಳ್ಳಿ: ರಾಜ್ಯದ ಬಿಜೆಪಿ ಸರ್ಕಾರ ಆರ್ಥಿಕ ಅಶಿಸ್ತು, ಅತಿ ಹೆಚ್ಚು ಸಾಲ, ದುಂದು ವೆಚ್ಚ, ಭ್ರಷ್ಟಾಚಾರ ಮಾಡುತ್ತಾ ದಿವಾಳಿ ಹಂತಕ್ಕೆ ತಲುಪಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆರೋಪಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಮಹಾಮಾರಿ ಕರೋನಾದಿಂದ ಎರಡು ತಿಂಗಳು ಸಂಪೂರ್ಣ ಲಾಕ್ ಡೌನ್ ಆಗಿ ಆರ್ಥಿಕ ಚಟುವಟಿಕೆಗಳು ನಿಂತು ಹೋಗಿದ್ದವು. ಆದರೆ ಇದೀಗ ಎಲ್ಲ ಆರ್ಥಿಕ ಚಟುವಟಿಕೆಗಳು ಪ್ರಾರಂಭಗೊಂಡಿದ್ದು, ಮತ್ತೆ ಸರ್ಕಾರಕ್ಕೆ ತೆರಿಗೆ ಹಣ ಹರಿದುಬರುತ್ತಿದ್ದೆ. ಆದರು ಸಹಿತ ಸರ್ಕಾರ ಕರೋನಾ ಹೆಸರಿನಲ್ಲಿ ಅಭಿವೃದ್ಧಿ ಮಾಡದೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯಾವಾಗ ಅಧಿಕಾರಕ್ಕೆ ಬಂದಿದೆ ಅವಾಗೇಲ್ಲಾ ಕಾನೂನು ಉಲ್ಲಂಘನೆ ಮಾಡಿ ಆರ್ಥಿಕ ಅಶಿಸ್ತು ಮಾಡುತ್ತಾ ಬಂದಿದೆ. 2017-18 ರಲ್ಲಿ ಸಿದ್ದರಾಮಯ್ಯನವರ ಅಧಿಕಾರ ಇದ್ದಾಗ 2.42.421 ಕೋಟಿ ಸಾಲ ಇತ್ತು. ಇದೀಗ ಬಿಜೆಪಿ ಸರ್ಕಾರ ಕೇವಲ ಒಂದು ವರ್ಷ ಅವಧಿಯಲ್ಲಿ 1.26.337 ಕೋಟಿ ಸಾಲ ಮಾಡುವ ಮೂಲಕ ಅತಿಹೆಚ್ಚು ಸಾಲ ಮಾಡಿದೆ. ಇದೀಗ ಮತ್ತೆ ಕೊರೋನಾ ಹೆಸರಿನಲ್ಲಿ ಮಾಡಿದ 40 ಸಾವಿರ ಕೋಟಿ ಬಿಟ್ಟು 52.984 ಕೋಟಿ ಸಾಲ ಪಡೆಯಲು ಅನುಮೋದನೆ ಪಡೆದು ಶಾಸಕರು, ಮಂತ್ರಿಗಳ ಸಂಬಳ ಹಾಗೂ ಇನ್ನಿತರ ಖರ್ಚು ವೆಚ್ಚಗಳನ್ನು ಸರಿಪಡಿಸಲು ಹೊರಟಿರುವುದು ಖಂಡನೀಯ. ಇದೇ ರೀತಿ ಸಾಲ ಮಾಡಿದರೇ ಆರ್ಥಿಕ ವರ್ಷದ ಅಂತ್ಯಕ್ಕೆ ರಾಜ್ಯದ ಸಾಲ 4.01.692 ಕೋಟಿ ಆಗುವುದು ಈ ಹಿನ್ನೆಲೆಯಲ್ಲಿ ಸರ್ಕಾರ ಮಾಡುತ್ತಿರುವ ದುಂದುವೆಚ್ಚ, ಸರ್ಕಾರ ಮಾಡಿದ ಸಾಲ, ಆರ್ಥಿಕತೆ ಬಗ್ಗೆ ಬಜೆಟ್ ನಲ್ಲಿ ಸಂಪೂರ್ಣ ಚರ್ಚೆ ಆಗಬೇಕೆಂದು ಒತ್ತಾಯಿಸಿದರು.ಇನ್ನೂ ರಾಜ್ಯ ಸರ್ಕಾರ ಆಡಳಿತ ನಿರ್ವಹಣೆಯಲ್ಲಿ ವಿಫಲವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಆರ್ಥಿಕ ದುಂದು ವೆಚ್ಚ ಮಾಡಿ ರಾಜ್ಯವನ್ನು ಸಾಲದ ಶೂಲಕ್ಕೆ ಹಾಕುತ್ತಿದ್ದಾರೆ. ಬಿಜೆಪಿ ಸರ್ಕಾರಕ್ಕೆ ನೈತಿಕತೆ ಎಂಬುದು ಇದ್ದರೆ ಅಧಿಕಾರ ಬಿಟ್ಟು ಕೆಳಗಿಳಿಯಬೇಕೆಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ನಮೀದ್ ಮುಲ್ಲಾ ಸೇರಿದಂತೆ ಮುಂತಾದವರು ಇದ್ದರು.ಕೋಟ್ ರಾಜ್ಯದಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ಆಗಲಿ ಅಥವಾ ಬಿಜೆಪಿಯ ಯಾರೇ ಆದರೂ ಅವರ ವಿರುದ್ಧ ಪ್ರಾಮಾಣಿಕವಾಗಿ ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version