Uncategorized

ಪಶುಗಳಿಗೆ ಉಚಿತ ಜಂತು ನಾಶಕ ಔಷಧಿಗಳನ್ನು ಹಾಕುವ ಅಭಿಯಾನಕ್ಕೆ ಚಾಲನೆ..!

Published

on

ಮಳವಳ್ಳಿ: ಪಶು ಸಂಗೋಪನೆ ಇಲಾಖೆ ಮಂಡ್ಯ ,ಜಿಲ್ಲಾ ಪಂಚಾಯತ್ ಮಂಡ್ಯ,ಮಳವಳ್ಳಿ ಪಶು ಚಿಕಿತ್ಸಾಲಯ ಹಾಗೂ ಪಶು ಆಸ್ಪತ್ರೆ ಹಲಗೂರು ಮತ್ತು ಕೊನ್ನಪುರ ಹಾಲು ಉತ್ಪಾದಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪಶುಗಳಿಗೆ ಉಚಿತ ಜಂತು ನಾಶಕ ಔಷಧಿಗಳನ್ನು ಹಾಕುವ ಅಭಿಯಾನಕ್ಕೆ ಕೊನ್ನಪುರ ಗ್ರಾಮದಲ್ಲಿ ಚಾಲನೆ ನೀಡಲಾಯಿತು. ಮಳವಳ್ಳಿ ತಾಲ್ಲೂಕಿನ ಕೊನ್ನಪುರಗ್ರಾಮದ ರೈತ ಸಮುದಾಯದ ತಮ್ಮ ರಾಶುಗಳಿಗೆ ಜಂತು ನಾಶಕ ಔಷಧಗಳನ್ನು ಹಾಕಿಸುವ ಮೂಲಕ ಜಂತು ನಾಶಕ ಔಷಧ ಅಭಿಯಾನಕ್ಕೆ ಉತ್ತಮವಾಗಿ ಸ್ಪಂಧಿಸಿದ್ದಾರೆ. ಈ ಔಷಧಿಯನ್ನುಕಾಲು ಬಾಯಿ ಜ್ವರ ಲಸಿಕೆಯನ್ನು ಹಾಕುವ ಹದಿನೈದು ದಿನಗಳ ಮುನ್ನ ಜಂತು ನಾಶಕ ಔಷಧಗಳನ್ನು ಕುಡಿಸಬೇಕು ನಂತರ ಕಾಲು ಬಾಯಿ ಜ್ವರ ಲಸಿಕೆ ಹಾಕಿಸಬೇಕು ಎರಡು ಔಷಧಗಳನ್ನು ಹಾಕಿಸುವುದರಿಂದ ಕಾಲು ಬಾಯಿ ಜ್ವರ ಹಾಗೂ ಜಂತು ಹುಳುವನ್ನು ಎರಡನ್ನೂ ತಡೆಗಟ್ಟಬಹುದು ಎಂದು ಹಲಗೂರು ಪಶು ಆಸ್ಪತ್ರೆಯ ಸೂಪರ್ ವೈಸರ್ ಬಸವರಾಜ್ ತಿಳಿಸಿದರು.ಈ ಸಂದರ್ಭದಲ್ಲಿ ಪಶು ಆಸ್ಪತ್ರೆಯ ಸಿಬಂಧಿಗಳಾದ ಗುಂಡಾಪುರ ರಾಜಣ್ಣ,ಅಂಕಯ್ಯ,ಹಾಗೂ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ನಾಗರಾಜ್, ಗ್ರಾಮಸ್ಥರಾದ ಚಿಕ್ಕಲಿಂಗಣ್ಣ , ಅಂದಾನಿ,ಸೇರಿದಂತೆ ಮತ್ತಿತ್ತರರು ಇದ್ದರು

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version