ಮೈಸೂರು

ರಾಷ್ಟ್ರಕವಿ ಕುವೆಂಪು ವಿಶ್ರಾಂತಿ ಪಡೆಯುತ್ತಿದ್ದ ಬಸ್ ನಿಲ್ದಾಣ ನೆಲಸಮಕ್ಕೆ ಯತ್ನ..!

Published

on

ಮೈಸೂರು: ರಾಷ್ಟ್ರಕವಿ ಕುವೆಂಪು ಅವರು ವಾಯು ವಿಹಾರ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಕುಕ್ಕರಹಳ್ಳಿ ಕೆರೆಯ ಒಂದು ಭಾಗದಲ್ಲಿ ರಂಗಾಯಣ ನಿರ್ಮಿಸಿ ಅವರ ನೆನಪು ಮಾಡಿಕೊಳ್ಳಲಾಗುತ್ತದೆ. ಹಾಗೆಯೇ ಕುವೆಂಪು ಅವರು ಒಂಟಿ ಕೊಪ್ಪಲಿನಲ್ಲಿ ಒಂದು ಸುತ್ತು ವಾಯುವಿಹಾರ ಮಾಡಿ ಬಹುತೇಕ ಸಮಯವನ್ನು ತಮ್ಮ ಮನೆ ಸಮೀಪದ ಪಾಪಾರಾಂ ಬಸ್ ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.ಅದೇ ಬಸ್ ನಿಲ್ದಾಣದಲ್ಲಿ ಕುವೆಂಪು ಅವರಿಗೆ ಹಲವು ಪುಸ್ತಕ ಬರೆಯಲು ಪ್ರೇರಣೆ ಕೂಡ ಆಗಿತ್ತು. ಹಳೆ ಬಸ್ ನಿಲ್ದಾಣ ಧರಶಾಯಿ ಸ್ಥಿತಿಯಲ್ಲಿದ್ದ ಕಾರಣ ಈಗಿನ ನವೀನತೆಗೆ ತಕ್ಕಂತೆ ಈ ಬಸ್ ನಿಲ್ದಾಣವನ್ನು ನವೀಕರಿಸಲಾಗಿತ್ತು. ಕುವೆಂಪು ಅವರ ಹೆಸರಾಗಿ ಇದ್ದ ಬಸ್ ನಿಲ್ದಾಣವನ್ನು ಉದ್ಯಮಿಯೊಬ್ಬರು ನೆಲಸಮಗೊಳಿಸಲು ಮುಂದಾಗಿದ್ದಾರೆ.ಮೈಸೂರಿನ ಗೋಕುಲಂ ಮುಖ್ಯರಸ್ತೆಯಲ್ಲಿ ತಾವು ನಿರ್ಮಾಣ ಮಾಡುತ್ತಿರುವ ಕಮರ್ಷಿಯಲ್ ಬಿಲ್ಡಿಂಗ್ ಗೆ ಬಸ್ ನಿಲ್ದಾಣ ಅಡ್ಡವಾಗುತ್ತದೆ ಎಂಬ ಕಾರಣದಿಂದ ಉದ್ಯಮಿ ನೆಲಸಮಗೊಳಿಸು ಯತ್ನಿಸಿದ್ದಾರೆ.ಬರೋಬರಿ 60 ವರ್ಷಗಳ ಇತಿಹಾಸವಿರುವ ಬಸ್ ನಿಲ್ದಾಣ ನೆಲಸಮಗೊಳಿಸಲು ಉದ್ಯಮಿ ನಗರ ಪಾಲಿಕೆಯ ಅನುಮತಿ ಕೂಡ ಪಡೆದಿಲ್ಲ.ಸಾರ್ವಜನಿಕರ ಉಪಯೋಗಕ್ಕೆ ಇದ್ದ ಬಸ್ ನಿಲ್ದಾಣವನ್ನು ನೆಲಸಮಗೊಳಿಸಲು ಈ ಉದ್ಯಮಿಗೆ ಯಾವುದೇ ಹಿಂಜರಿಕೆ ಇಲ್ಲದಂತಾಗಿದೆ.ಸ್ಥಳಿಯರು ಬಸ್ ನಿಲ್ದಾಣ ನೆಲಸಮ ಮಾಡಬಾರದೆಂದು ವಿರೋಧ ವ್ಯಕ್ತಪಡಿಸಿದರೂ ಆ ಉದ್ಯಮಿ ಕೇರ್ ಮಾಡಿಲ್ಲ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version