Uncategorized

ಟಿಎಪಿಸಿಎಂಎಸ್ ಆವರಣದಲ್ಲಿ ನಾಮಪತ್ರ ಸಲ್ಲಿಕೆ..!

Published

on

ಮಳವಳ್ಳಿ: ಇದೇ ಸೆ. 30 ರಂದು ಟಿಎಪಿಸಿಎಂಎಸ್ ಸಂಸ್ಥೆ ಚುನಾವಣೆಯ ಹಿನ್ನಲೆಯಲ್ಲಿ ನಾಮಪತ್ರ ಸ್ಥಾನವಿದ್ದು ದಿನವಾದ ಇಂದು ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಮುಗಿಬಿದ್ದ ಘಟನೆ ಮಳವಳ್ಳಿ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ನಡೆಯಿತು., ಮಳವಳ್ಳಿ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಕಾಂಗ್ರೆಸ್ , ಜೆಡಿಎಸ್ , ಹಾಗೂ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿ ಗಳ ನಾಮಪತ್ರ ಸಲ್ಲಿಸಲು ಮುಂದಾದರು.ಇನ್ನೂ ಎ. ತರಗತಿಗೆ 35 ಮಳವಳ್ಳಿತಾಲ್ಲೂಕಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಎ.ತರಗತಿ, ಅದರಲ್ಲಿ ಹಾಡ್ಲಿ, ಬಂಡೂರು , ವಡ್ಡರಹಳ್ಳಿ 3 ಸೊಸೈಟಿ ಗಳು ಡೆಲಿಗೇಶನ್ ತಿರಸ್ಕೃತಗೊಂಡಿದ್ದು, ಇನ್ನೂ ಉಳಿದ 32 ಮಳವಳ್ಳಿತಾಲ್ಲೂಕಿನಲ್ಲಿ ಪ್ರಾಥಮಿಕ ಕೃಷಿ ಪತ್ತಿ ಸಹಕಾರ ಸಂಘಗಳ ಪೈಕಿ 6 ಸ್ಥಾನ ಆಯ್ಕೆಯಾಗಬೇಕಾಗಿದ್ದು, ಚುನಾವಣೆ ನಡೆಯಲಿದೆ.ಬಿ .ತರಗತಿ ಯಲ್ಲಿ 8 ಸ್ಥಾನ ಆಯ್ಕೆಯಾಗಬೇಕಾಗಿದ್ದು ಅದರಲ್ಲಿ ಹಲಗೂರು ಹೋಬಳಿ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಅದರಲ್ಲಿ ಯಾವ ಅಭ್ಯರ್ಥಿ ಇಲ್ಲದ ಕಾರಣ.ಯಾವುದೇ ಉಮೇದುವಾರಿಕೆ ಅರ್ಜಿ ಬಂದಿರುವುದಿಲ್ಲ.ಉಳಿಕೆ 7 ಸ್ಥಾನ ಬಿ ತರಗತಿಗೆ ಚುನಾವಣೆ ನಡೆಯುತ್ತಿದೆ. ಬಿಜಿಪುರ ಹೋಬಳಿಗೆ 1 ಸ್ಥಾನ ಬಿಸಿಎಂ ಎ ,ಕಸಬಾ ಹೋಬಳಿ 2 ಸ್ಥಾನ ಪೈಕಿ 1 ಸಾಮಾನ್ಯ. ಇನ್ನೊಂದು ಸಾಮಾನ್ಯ ಮಹಿಳೆ ಮೀಸಲುಯಾಗಿದ್ದು,ಕಿರುಗಾವಲು ಹೋಬಳಿ 3 ಸ್ಥಾನ ಪೈಕಿ ಒಂದು ಸಾಮಾನ್ಯ, ಇನ್ನೊಂದು ಸಾಮಾನ್ಯ ಮಹಿಳೆ, ಮತ್ತೊಂದು ಪರಿಶಿಷ್ಠಜಾತಿ ಮೀಸಲಾಗಿದ್ದು. ಮಳವಳ್ಳಿಪಟ್ಟಣ 1 ಸ್ಥಾನ ಬಿಸಿಎಂ ಎ ಮೀಸಲು ಸ್ಥಾನವಿದ್ದು , ಈಗಾಗಲೇ ಬಿಜೆಪಿ. ಕಾಂಗ್ರೇಸ್ ,ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರವನ್ನು ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಚಂದ್ರಮೌಳಿ ರವರಿಗೆ ಸಲ್ಲಿಸಿದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version