ಲಿಂಗಸೂಗೂರು

ಶ್ರೀ ಕ್ಷೇತ್ರದಲ್ಲಿ ಗಬ್ಬೆದ್ದು ನಾರುತ್ತಿದೆ ಚರಂಡಿ- ಅಧಿಕಾರಿಗಳು ಮೌನ..!

Published

on

ಲಿಂಗಸೂಗೂರು: ಅದು ಧಾರ್ಮಿಕ ಕ್ಷೇತ್ರ, ಅಂತಹ ಧಾರ್ಮಿಕ ಕ್ಷೇತ್ರಕ್ಕೆ ದಿನನಿತ್ಯ ನೂರಾರು ಜನರು ಭಕ್ತರು ಪೂಜೆಗೆಂದು ಅಗಮಿಸುತ್ತಾರೆ. ಆಗಮಿಸುವ ಭಕ್ತರು ಹಾಗೂ ಗ್ರಾಮದ ಜನರು ಗಬ್ಬು ವಾಸನೆಯನ್ನೇ ಸೇವಿಸುತ್ತಾ ದಿನ ದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಶ್ರೀ ಕ್ಷೇತ್ರ ಸಜ್ಜಲಗುಡ್ಡ ಗ್ರಾಮದಲ್ಲಿ ಕಳೆದ 10 ವರ್ಷಗಳ ಹಿಂದೆ ಚರಂಡಿಯನ್ನು ನಿರ್ಮಾಣ ಮಾಡಲಾಗಿತ್ತು. ಚರಂಡಿ ನಿರ್ಮಾಣವಾದ ದಿನದಿಂದ ಇಂದಿನವರೆಗೆ ಸ್ವಚ್ಚತೆ ಮಾಡದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಜ್ಜಲಗುಡ್ಡ-ಕೋಡಿಹಾಳ ಮಾರ್ಗ ಮಧ್ಯೆ ಚರಂಡಿ ತುಂಬಿ, ಚರಂಡಿಯಲ್ಲಿರುವ ಮಲೀನ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಈ ವಿಷಯ ಕುರಿತು ಸಜ್ಜಲಗುಡ್ಡ ಗ್ರಾಮಸ್ಥರು ಅನೇಕ ಬಾರಿ ಬಯ್ಯಾಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೆ ಅಧಿಕಾರಿಗಳು ಮಾತ್ರ ಗಮನ ಹರಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಅಧಿಕಾರಿಯ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.ಇನ್ನು ಚರಂಡಿ ಸ್ವಚ್ಚತೆಯನ್ನು ಗ್ರಾಮದ 45 ಮನೆಗಳ ಜನರು ಮನೆ-ಮನೆಗೆ 50 ರೂ.ನಂತೆ 2200 ರೂ.ಕಲೆಕ್ಟ್ ಮಾಡಿ ಚರಂಡಿಯನ್ನು ಸ್ವಚ್ಚಗೊಳಿಸಿದ್ದಾರೆ.ಆದರೂ ಚರಂಡಿಯಲ್ಲಿರುವ ಮಲೀನ ನೀರು ಮುಂದೆಯೂ ಹೋಗದೇ, ಹಿಂದೆಯೂ ಹೋಗದೇ ನಿಂತಲ್ಲೇ ನಿಂತಿದೆ. ಸಂಬಂಧಪಟ್ಟ ಅಧಿಕಾರಿಗಳು ಬೇಗ ಎಚ್ಚೆತ್ತು ಗ್ರಾಮದ 45 ಮನೆಗಳ ಜನರಿಗೆ ಚರಂಡಿಯ ಗಬ್ಬು ವಾಸನೆಯಿಂದ ಮುಕ್ತಿ ನೀಡುತ್ತಾರಾ?ಕಾದುನೋಡಬೇಕಿದೆ.

ವರದಿ:ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು.

Click to comment

Trending

Exit mobile version