Uncategorized

ಕಾಡಿನಿಂದ ನಾಡಿಗೆ ಬಂದ ಜಿಂಕೆಯ ರಕ್ಷಣೆ- ರೈತ, ಯುವಕರ ಕಾರ್ಯಕ್ಕೆ ಪ್ರಶಂಸೆ..!

Published

on

ಸೊರಬ: ಜಿಂಕೆಯೊಂದು ಆಹಾರ ಅರಸುತ್ತ ಅರಣ್ಯದಿಂದ ಬೇರ್ಪಟ್ಟು ತಾಲೂಕಿನ ಉರಗನಹಳ್ಳಿ ಗ್ರಾಮದ ಜನವಸತಿ ಪ್ರದೇಶಕ್ಕೆ ಆಗಮಿಸಿ ಗ್ರಾಮದ ಬೀದಿನಾಯಿಗಳ ದಾಳಿಯಿಂದ ಗಾಯಗೊಂಡ ಘಟನೆ ನಡೆದಿದೆ. ಉರಗನಹಳ್ಳಿಯ ಗ್ರಾಮಸ್ಥರು ಜಿಂಕೆಯನ್ನು ನಾಯಿಗಳಿಂದ ರಕ್ಷಿಸಿ ಜೀವದಾನ ನೀಡಿದ್ದು, ದಾಳಿಯಿಂದ ಸಣ್ಣಪುಟ್ಟ ಗಾಯಗಳು ಕಂಡು ಬಂದಿವೆ. ಅರಣ್ಯದಿಂದ ಬೇರ್ಪಟ್ಟ ಜಿಂಕೆ ಬುಧವಾರ ಮುಂಜಾನೆ ಉರಗನಹಳ್ಳಿ ಗ್ರಾಮಕ್ಕೆ ಬಂದಾಗ ಅದನ್ನು ಗಮನಿಸಿದ ಬೀದಿನಾಯಿಗಳು ಬೆನ್ನಟ್ಟಿ ಗಾಯಗೊಳಿಸಿದ್ದವು. ನಾಯಿಗಳ ದಾಳಿಯಿಂದ ಹೆದರಿದ ಜಿಂಕೆಯನ್ನು ಗಮನಿಸಿದ ಗ್ರಾಮದ ಅವಿನಾಶ್, ಪುನೀತ್ ಈ, ಶರತ್, ಪ್ರಸನ್ನ, ಸಚಿನ್, ನಿತೀಶ್, ಸಂತೋಷ್, ಸೇರಿದಂತೆ ಹಲವರು ನಾಯಿಗಳಿಂದ ಜಿಂಕೆಯನ್ನು ರಕ್ಷಿಸಿದ್ದಾರೆ. ಗಾಯಗೊಂಡಿದ್ದ ಜಿಂಕೆಗೆ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಈ ವಿಷಯವನ್ನ ಅರಣ್ಯ ಇಲಾಖೆಗೆ ಮುಟ್ಟಿಸಿದ್ದಾರೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version