ಬೆಂಗಳೂರು

ಎರಡನೇ ಬಾರಿ ಸಿಸಿಬಿ ವಿಚಾರಣೆಗೆ ಬಂದ ನಟ ದಿಗಂತ್..!

Published

on

ಬೆಂಗಳೂರು : ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಸಂಬಂಧಿಸಿದಂತೆ ಇಂದು ಎರಡನೇ ಬಾರಿ ನಟ ದಿಗಂತ್ ವಿಚಾರಣೆಗೆ ಹಾಜರಾಗಿದ್ದಾರೆ.ಇತ್ತೀಚೆಗೆ ಪ್ರಾಥಮಿಕ ಹಂತದಲ್ಲಿ ವಿಚಾರಣೆ ನಡೆಸಲಾಗಿತ್ತು. ಆದರೆ ಇದೀಗ ಮತ್ತಷ್ಟು ವಿಚಾರಣೆ ನಡೆಸಲು ಸಿಸಿಬಿ ಮುಂದಾಗಿದ್ದು, ಹೀಗಾಗಿ ವಿಚಾರಣಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ. ಸದ್ಯ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ಫೋನ್ನಲ್ಲಿದ್ದ ಮಾಹಿತಿಯನ್ನು ಪೊಲೀಸರು ರೀಟ್ರೀವ್ ಮಾಡಿದ್ದಾರೆ.ನಟ ದಿಗಂತ್ಗೆ ಮುಳುವಾಗುತ್ತಾ ಅಂತ ಕಾದು ನೋಡಬೇಕಿದೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version