ಕೋಲಾರ

ಪೌರ ಕಾರ್ಮಿಕರ ದಿನಾಚರಣೆಯಲ್ಲಿ ರಾಜಕೀಯ ದೊಂಬರಾಟ..!

Published

on

ಕೋಲಾರ: ಕೋಲಾರದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ರಾಜಕೀಯ ದೊಂಬರಾಟಕ್ಕೆ ಸಾಕ್ಷಿಯಾಯಿತು, ನಗರದ ನಗರಸಭೆ ಆವರಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು, ಈ ವೇಳೆ ಪೌರ ಕಾರ್ಮಿಕರಿಗೆ ಮುಳಬಾಗಿಲಿನ ಮಾಜಿ ಶಾಸಕ ಕೊತ್ತೂರು ಮಂಜುನಾಥ ಪೌರ ದಿನಾಚರಣೆ ಪ್ರಯುಕ್ತ ಕೊಡುಗೆಯಾಗಿ ಮಿಕ್ಸಿ, ಗ್ರೈಂಡರ್ ಗಳನ್ನು ಕೊಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ದಲಿತ ಸಂಘಟನೆಗಳ ಮುಖಂಡರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ರು. ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡ ಎಸ್ಸಿ ಸಮುದಾಯವನ್ನು ವಂಚಿಸಿರುವ ಕೊತ್ತೂರು ಮಂಜುನಾಥ ಕೋಲಾರದಲ್ಲಿ ರಾಜಕೀಯ ಶುರು ಮಾಡಲು ಬರುತ್ತಿದ್ದಾರೆ, ನಮ್ಮ ಮೀಸಲಾತಿ ಹಕ್ಕುನ್ನು ಕಿತ್ತುಕೊಂಡಿರುವ ಕೊತ್ತೂರು ಮಂಜುನಾಥ ಕೋಲಾರದಲ್ಲಿ ರಾಜಕೀಯ ಮಾಡಬಾರದು ಕಾರ್ಯಕ್ರಮದಲ್ಲಿ ಮಂಜುನಾಥ ಭಾಗವಹಿಸಿದ್ರೆ ಬೆತ್ತಲೆ ಪ್ರತಿಭಟನೆ ನಡೆಸುವುದಾಗಿ ನಗರಸಭೆ ಆಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇನ್ನೂ ಇದೇ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಕೆಎಚ್ ಮುನಿಯಪ್ಪ ಬೆಂಬಲಿಗ ನಗರಸಭೆ ಸದಸ್ಯರು ಕೂಡ ಪೌರ ಕಾರ್ಮಿಕರಿಗೆ ಮಿಕ್ಸಿ ಗ್ರೈಂಡರ್ ಗಳನ್ನು ಕೊತ್ತೂರು ಮಂಜುನಾಥ ಅವರಿಂದ ಪಡೆಯಬಾರದು ಎಂದು ನಗರಸಭೆ ಆಯುಕ್ತ ಶ್ರೀಕಾಂತ್ ಜೊತೆ ವಾಗ್ವಾದ ನಡೆಸಿದರು. ಪೌರ ಕಾರ್ಮಿಕರ ದಿನಾಚರಣೆಯನ್ನು ಅದ್ದೂರಿ ಆಚರಣೆಗೆ ನಾವು ಬೆಂಬಲ ನೀಡುತ್ತೇವೆ ಆದ್ರೆ ದಿನಾಚರಣೆಯನ್ನು ರಾಜಕೀಯ ಬಳಸಿಕೊಳ್ಳಬಾರದೆಂದು ಕೆಲವು ನಗರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ವರದಿ- ಬೆಟ್ಟಪ್ಪ ಎಕ್ಸ್ ಪ್ರೆಸ್ ಟಿವಿ ಕೋಲಾರ

Click to comment

Trending

Exit mobile version