ತಿಪಟೂರು

ಪೌರ ಕಾರ್ಮಿಕರ ದಿನಾಚರಣೆ ವಿಶಿಷ್ಟ ರೀತಿಯಲ್ಲಿ ಆಚರಣೆ..!

Published

on

ತಿಪಟೂರು: ಪೌರ ಕಾರ್ಮಿಕರ ದಿನಾಚರಣೆಯನ್ನು ನಗರಸಭಾ ಆವರಣದಲ್ಲಿ ವಿಶಿಷ್ಟ ರೀತಿಯಲ್ಲಿ ಪೌರ ಕಾರ್ಮಿಕರ ಪಾದ ಪೂಜೆ ಮತ್ತು ಪುಷ್ಪನಮನ ಸಲ್ಲಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.ಇದೆ ವೇಳೆ ಮಾತನಾಡಿದ ತಹಸೀಲ್ದಾರ್ ಚಂದ್ರಶೇಖರ್ ಅವರು ಪೌರಕಾರ್ಮಿಕರು ಹಗಲು ರಾತ್ರಿ ಎನ್ನದೆ ಕರೋನಾ ವಾರಿಯರ್ಸ್ ಗಳಾಗಿ ಕರ್ತವ್ಯ ನಿರ್ವಹಿಸಿದ ಜೊತೆಗೆ ನಗರದ ಸ್ವಚ್ಛತೆಗೆ ನಿಮ್ಮ ಸೇವೆ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.ಪೌರ ಕಾರ್ಮಿಕರು ಎಂದರೆ ದೇವರು ಸೃಷ್ಟಿಕರ್ತರು ನಗರದ ಸ್ವಚ್ಛತೆ ಜೊತೆ ಸಾರ್ವಜನಿಕರ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿರುವ ಇವರಿಗೆ ಪ್ರತಿಯೊಬ್ಬ ನಾಗರಿಕರು ಗೌರವಿಸಬೇಕು ಎಂದು ಈ ಮೂಲಕ ತಿಳಿಸಿದರು.ಡಿವೈಎಸ್ಪಿ ಚಂದನ್ ಕುಮಾರ್ ಅವರು ಮಾತನಾಡಿ ಪೊಲೀಸರು ಮತ್ತು ಪೌರಕಾರ್ಮಿಕರು ಒಂದೇ ಕುಟುಂಬದವರಂತೆ ಇಬ್ಬರೂ ಕೂಡ ಖಾಕಿ ಬಟ್ಟೆ ಧರಿಸಿ ಸಮಾಜ ಶುಚಿಗೊಳಿಸುವ ಕಾರ್ಯ ಮಾಡುತ್ತಿದ್ದೇವೆ ಕೆಲಸಕ್ಕಿಂತ ಸೇವೆ ಮುಖ್ಯ ನಗರ ಸ್ವಚ್ಛವಾಗಲು ಕಾರಣಕರ್ತರೇ ಪೌರ ಕಾರ್ಮಿಕರು ಎಂದು ಈ ಮೂಲಕ ತಿಳಿಸಿದರು.ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತ ಗಮನ ಹರಿಸಬೇಕು ಮತ್ತು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತಾಲ್ಲೂಕು ಉಪ ಅಧೀಕ್ಷರಾದ ಚಂದನ್ ಕುಮಾರ್ ತಹಶೀಲ್ದಾರ್ ಚಂದ್ರಶೇಖರ್ .ನಗರಸಭಾ ಆಯುಕ್ತರಾದ ಉಮಾಕಾಂತ್, ಮತ್ತು ನೌಕರರ ಸಂಘದ ಅಧ್ಯಕ್ಷರಾದ ಕಾಂತರಾಜು, ಜಯಪ್ಪ, ನಾಗೇಶ್, ಮುನಿಸ್ವಾಮಿ, ಕಾವ್ಯ ,ಶ್ರೀನಿವಾಸ್, ಮತ್ತು ಪುರಸಭೆ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

ವರದಿ-ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Click to comment

Trending

Exit mobile version