ವಿಜಯಪುರ

ದೇಶ ಹಾಳು ಮಾಡಲು ಬಾಂಬ್ ಬೇಕಿಲ್ಲ, ಆ ದೇಶದ ಯುವಕರನ್ನ ಮಾದಕ ವ್ಯಸನಿ ಮಾಡಿದರೆ ಸಾಕು..!

Published

on

ವಿಜಯಪುರ: ಡ್ರಗ್ಸ್ ದಂದೆ ಎನ್ನುವುದು ಟೆರರಿಜಂನ ಒಂದು ಭಾಗ ಆ ದೇಶವನ್ನು ಹಾಳ ಮಾಡಲು ಬಾಂಬ್ ಅವಶ್ಯಕತೆ ಇಲ್ಲ. ಆ ದೇಶದ ಯುವಕರನ್ನು ಮಾದಕ ವ್ಯಸನಿಯಾಗಿ ಮಾಡಿದ್ದರೆ ಸಾಕು. ಇದರಿಂದ ಆ ದೇಶ ತಾನಾಗಿಯೇ ಸರ್ವನಾಶವಾಗುತ್ತದೆ.ಇಂತಹ ಕೆಟ್ಟ ಸ್ಥಿತಿ ನಮ್ಮ ಕರ್ನಾಟಕ ರಾಜ್ಯಕ್ಕೆ ಅಂಟಿಕೊಂಡಿದೆ. ಕೂಡಲೇ ರಾಜ್ಯ ಸರಕಾರ ಪ್ರಬಲ ಕಾನೂನು ರೂಪಿಸಿ ಡ್ರಗ್ಸ್ ಮಾಪಿಯಾ ತೊಡಗಿದವರನ್ನು ಮಟ್ಟಹಾಕಬೇಕೆಂದು ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಇಂಡಿ ಘಟಕದ ವತಿಯಿಂದ ಕಂದಾಯ ಇಲಾಖೆಯ ಶಿರಸ್ತೆದಾರ ಪಿ.ಎಚ.ಗಲಗಲಿಯವರ ಮೂಲಕ ಗೃಹ ಸಚಿವ ಮನವಿ ಸಲ್ಲಿಸಿದರು.ಈ ಸಂದರ್ಬದಲ್ಲಿ ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಇಂಡಿ ಘಟಕ ಸದಸ್ಯ ಪ್ರವೀಣ ಮನಮಿ ಮಾತಾನಾಡಿ ಮಾದಕ ವಸ್ತುಗಳ ಪಿಡಗು ರಾಜ್ಯವನ್ನು ಗುರಿಯಾಗಿಸಿಕೊಂಡಿರುವುದು ಅತ್ಯಂತ ದುಃಖಕರ ಮತ್ತು ಖಂಡನಿಯವಾಗಿದೆ.ಇದು ಕೇವಲ ಯುವ ಸಮುದಾಯ ಅಲ್ಲದೇ ಯಾವ ಲಿಂಗ ಬೇದವಿಲ್ಲದೇ ಎಲ್ಲಾ ವಯಮಾನವರನ್ನು ಕೂಡಾ ಗುರಿಯಾಗಿಸಿಕೊಂಡಿದೆ. ಇದರಿಂದ ದೇಶಕ್ಕೆ ಆದರ್ಶ ಪ್ರಜಗಳಾಗಿಬೇಕಾದ್ದ ಯುವಕರು ಡ್ರಗ್ಸ್ ಲೋಕದಲ್ಲಿ ಮುಳುಗಿ ಹೋಗಿದ್ದಾರೆ.ಸಿನಿಮಾ ಲೋಕದ ನಟ,ನಟಿಯರನ್ನು ತಮ್ಮ ಆದರ್ಶವೆಂದು ಅನುಸರಿಸು ಜನಾಂಗ ಅವರಂತೆ ತಮ್ಮ ಬದುಕಿನ ದಿನಗಳನ್ನು ಸಾಗಿಸಲು ಇಚ್ಚೆಪಡುತ್ತಾರೆ.ಕೆಲ ದಿನಗಳಿಂದ ಡ್ರಗ್ಸ್ ಸಿನಿಮಾ ಲೋಕವನ್ನೆ ಅಂಟಿಕೊಂಡು ಬಗ್ಗೆ ಬೆತ್ತಲೆ ಆಗುತ್ತಿದೆ. ಡ್ರಗ್ಸ್ ದಂದೆಯಲ್ಲಿ ಸ್ಯಾಂಡಲ್ ವುಡ್ಡ್ ಅಷ್ಟೆಯಲ್ಲದೇ, ಅನೇಕ ರಾಜ್ಯದ ರಾಜ ಕಾರಣಿಯ ನಂಟು ಅಂಟುಕೊಂಡು ಜೊತೆಗೆ ಉದ್ದಿಮೆದಾರರು ಕೂಡಾ ತಳಕು ಹಾಕೊಂಡ ಬಗ್ಗೆ ವ್ಯಕ್ತ ವಾಗಿದೆ.ಆದ್ದರಿಂದ ಸರಕಾರ ಕಠಿಣ ಕ್ರಮಗಳು ತೆಗೆದುಕೊಳ್ಳದಿದ್ದರೆ ಭವಿಷ್ಯದಲ್ಲಿ ಕರ್ನಾಟಕ ಮಾದಕ ವ್ಯಸನಿ ಕರ್ನಾಟಕ ವಾಗುತ್ತೆದೆ ಎಂದು ತಿಳಿಸಿದರು. ಈ ಕೂಡಲೇ ಸರಕಾರ ಪ್ರಬಲ ಕಾನೂನು ಗಳನು ರಚನೆ ಮಾಡಿ ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ವರದಿ- ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್ ಇಂಡಿ

Click to comment

Trending

Exit mobile version