ವಿಜಯಪುರ

4 ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ- ಸಂವಿಧಾನಕ್ಕೆ ಅಪಮಾನ ಮಾಡಿದ ಕರ್ನಾಟಕ ಸರ್ಕಾರ..!

Published

on

ವಿಜಯಪುರ : ಸಂವಿಧಾನಕ್ಕೆ ಅಪಮಾನ, ಸಂವಿಧಾನಕ್ಕೆ ದಕ್ಕೆ ತರುವ ಕೆಲಸ ಕರ್ನಾಟಕ ಸರಕಾರ ಮಾಡಿದೆ ಎಂದು ನೆರೆಯ ಮಹಾರಾಷ್ಟದ ರಾಜ್ಯದ ಕೋಳಿ ಸಮಾಜದ ಪ್ರದಾನ್ ಕಾರ್ಯದರ್ಶಿ ಸಿದ್ದಾರ್ಥ ಕೋಳಿ ಕರ್ನಾಟಕ ಸರಕಾರದ ವಿರುದ್ದ ಗುಡಗಿದರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಳವಾರ ಪರಿವಾರ ಸಮುದಾಯದ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರದ ಹಿನ್ನೆಲೆ ನಡೆದ 4 ನೇ ದಿನದ ಧರಣಿ ಸತ್ಯಾಗ್ರಹ ದಲ್ಲಿ ಬೆಂಬಲ ಸೂಚಿಸಿ ಮಾತಾನಾಡಿದರು. ಕೇಂದ್ರ ಸರಕಾರ ನಾಯಕ್/ನಾಯ್ಕಡ್ ಸಮನಾಂತರ ಜಾತಿಯ ಪದಗಳದ ತಳವಾರ & ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿ ಆದೇಶ ಮಾಡಿದೆ. ಆದರೆ ರಾಜ್ಯ ಸರಕಾರ ಸುಳ್ಳು ಸುತ್ತೊಲೆ ಹೊರಡಿಸಿ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಒಂದು ವೇಳೆ ಸರಕಾರ ತನ್ನ ನಿರ್ಲಕ್ಷ್ಯತೆ ಮುಂದುವರಿಸಿದ್ರೆ ಹೋರಾಟದ ವ್ಯವಸ್ಥೆ ಕೂಡಾ ಬದಲಾವಣೆ ಮಾಡಲಾಗುತ್ತೆದೆ. ಸುಮಾರು 4೦ ರಿಂದ ವರ್ಷದ ಹೋರಾಟ ಫಲುವನ್ನು ಮಣ್ಣು ಪಾಲು ಮಾಡುತ್ತಿದ್ದಾರೆ. ನಮಗೆ ಭೀಮಾನದಿ ಮಾತ್ರ ಅಡ್ಡವಿದೆ. ನಾವು ಕೂಡಾ ಭಿಮಾನದಿ ದಾಟಿ ಸಹಸ್ರಾರು ಸಂಖ್ಯೆಯಲ್ಲಿ ಹೋರಾಟಕ್ಕೆ ಅಣಿಯಾಗ ಬೇಕಾಗುತ್ತದೆ. ಕೂಡಲೇ ರಾಜ್ಯ ಸರಕಾರ ಸಂವಿಧಾನಕ್ಕೆ ಮೌಲ್ಯ ನೀಡಿ ಈ ಶೊಷಿತ ಸಮಾಜಕ್ಕೆ ನ್ಯಾಯ ಕೊಡಬೇಕು ಎಂದು ಹೇಳಿದರು.

ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ

Click to comment

Trending

Exit mobile version