ಮಂಡ್ಯ

ಭೂ ಸುಧಾರಣೆ ಎಪಿಎಂಸಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ..!

Published

on

ಮಳವಳ್ಳಿ: ಭೂ ಸುಧಾರಣೆ, ವಿದ್ಯುತ್ ಭೂ ಸುಧಾರಣೆ, ವಿದ್ಯುತ್ ಮತ್ತು ಎಪಿಎಂಸಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ರೈತ ಕುಲವನ್ನು ದಿವಾಳಿ ಮಾಡುವ ರಾಜ್ಯ ಸರ್ಕಾರದ ವಿರುದ್ಧ ಪ್ರಾಂತ ರೈತ ಸಂಘ ಮತ್ತು ರೈತರಿಂದ ಮಾನವ ಸರಪಳಿ ನಿರ್ಮಿಸಿ ಮಳವಳ್ಳಿ ಪಟ್ಟಣದಲ್ಲಿ ರಸ್ತೆತಡೆ ಹಾಗೂ ಪ್ರತಿಭಟನೆ ನಡೆಸಿದರು.ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಪ್ರತಿಭಟನಾಕಾರರು ಹೊರಟು ಪ್ರಮುಖ ಬೀದಿಗಳ ಮೂಲಕ ಅನಂತರಾಂ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿ ಸರ್ಕಾರಗಳ ವಿರುದ್ದ ಘೋಷಣೆ ಕೂಗಿದರು. ಪ್ರತಿಭಟನೆ ನೇತೃತ್ವದಲ್ಲಿ ವಹಿಸಿದ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ಮಾತನಾಡಿ ರೈತರ ಸಮರಧೀರ ಹೋರಾಟದ ಫಲವಾಗಿ ಉಳುವವನೆ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ಬಂದು ಬಡ ಕೃಷಿಕರಿಗೆ ದಲಿತರಿಗೆ ಭೂಮಿ ದೊರಕಿತು ಆದರೆ ಇಂದು ಉಳ್ಳವನೆ ಭೂಮಿಯ ಒಡೆಯ ಎಂಬ ಕಾನೂನನ್ನು ಕೇದ್ರದ ನರೇಂದ್ರ ಮೋದಿ ಹಾಗೂ ರಾಜ್ಯದ ಯಡಿಯೂರಪ್ಪ ನವರ ಬಿಜೆಪಿ ಸರ್ಕಾರ ಯಾವ ಸದನದಲ್ಲೂ ಚರ್ಚಿಸದೆ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತರಲು ಹೊರಟಿದೆ ಇದರಿಂದ ಕಾರ್ಪೊರೇಟ್ ಕುಳಗಳಿಗೆ ಅನುಕೂಲವಾಗುತ್ತದೆ ನೂತನ ವಿದ್ಯುತ್ ಕಾಯ್ದೆಗಳಿಂದ ರೈತರ ಪಂಪ್ ಸೆಟ್ ಗಳಿಗೆ ಬಡವರ ಭಾಗ್ಯಜ್ಯೋತಿ ಕುಟಿರ ಜ್ಯೋತಿಗಳಿಗೆ ಮೀಟರ್ ಅಳವಡಿಸಿ ಬಿಲ್ ನೀಡುತ್ತಾರೆ ಮೊದ ಮೊದಲು ಸಬ್ಸಿಡಿಗಳನ್ನು ನಿಮ್ಮ ಬ್ಯಾಂಕ್ ಖಾತೆಗಳ ಹಾಕುತ್ತೆನೆಂದು ಹೇಳಿ ನಂತರ ಗ್ಯಾಸ್ ಸಬ್ಸಿಡಿಯ ರೀತಿ ಹಂತ ಹಂತವಾಗಿ ಕಡಿತ ಮಾಡುತ್ತಾರೆ. ಎಪಿಎಂಸಿ ರೈತರ ಸ್ವಾಯತ್ತತೆ ಸ್ವಾಭಿಮಾನದ ಪ್ರಾತಿನಿಧಿಕ ಸಂಸ್ಥೆ ರೈತರಿಂದ ಆಯ್ಕೆಯಾದ ಪ್ರತಿನಿಧಿಗಳು ಮಾರುಕಟ್ಟೆಯನ್ನು ರೈತರ ಅನುಕೂಲಕ್ಕೆ ತಕ್ಕಂತೆ ನಡೆಸುತ್ತಿದ್ದರು ಆದರೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಪೊರೇಟ್ ಕಂಪನಿಗಳಾದ ರಿಲೆಯೆನ್ಸ್. ಮೆಟ್ರೋ .ಬಿಗ್ ಬಜಾರ್. ನಂತಹ ಸಂಸ್ಥೆಗಳ ಹಿಡಿತಕ್ಕೆ ಮಾರಕಟ್ಟೆ ನೀಡಿ ರೈತರ ಸಮಾದಿ ಮಾಡಿ ತನ್ನ ಕಪಿಮುಷ್ಟಿಗೆ ಹಿಡಿದುಕೊಂಡು ಸಾಮಾನ್ಯ ರೈತರಿಗೆ ನ್ಯಾಯಯುತ ಬೆಲೆ ನೀಡದೆ ವಂಚಿಸುತ್ತಾರೆ ರಾಜ್ಯದಲ್ಲಿ 177 ಕೃಷಿ ಉತ್ಪನ್ನ ಮಾರುಕಟ್ಟೆಗಳ ವಹಿವಾಟು ಸ್ಥಗಿತಗೊಳ್ಳುತ್ತದೆ ಎಂದರು. ಪ್ರತಿಭಟನೆಯಲ್ಲಿ ರೈತ ಸಂಘದ ಮಾಜಿ ಅಧ್ಯಕ್ಷ ಎಳೇವೇಗೌಡ, ತಿಮ್ಮೇಗೌಡ ರಾಮಕೃಷ್ಣ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version