ಮಂಡ್ಯ

20 ವರ್ಷಗಳಿಂದ ನೀರಿಲ್ಲದೇ ಬರಡಾಗಿದೆ ಗ್ರಾಮದ ‘ದೊಡ್ಡಕೆರೆ’…!

Published

on

ಮಳವಳ್ಳಿ: ಮಳವಳ್ಳಿ ತಾಲ್ಲೂಕು ಹಲಗೂರು ಗ್ರಾಮದ ದೊಡ್ಡಕೆರೆಗೆ ಸುಮಾರು 20 ವರ್ಷಗಳಿಂದ ನೀರಿಲ್ಲದೇ ಬರಡಾಗಿದೆ. ಮಳವಳ್ಳಿ ತಾಲ್ಲೂಕಿನಿಂದ ರಾಮನಗರ ಜಿಲ್ಲೆಗೆ ಹಾಗೂ ಬೆಂಗಳೂರು ರಾಜಧಾನಿಗೆ ಟಿ.ಕೆ ಹಳ್ಳಿಯಿಂದ ಕಾವೇರಿ ನದಿಯನ್ನು ಐದು ಹಂತದ ಯೋಜನೆಯಲ್ಲಿ ಅದೆಷ್ಟೋ ಕ್ಯೂಸೆಕ್ ನೀರನ್ನು ಸುರಂಗ ಮಾರ್ಗವಾಗಿ ತೆಗೆದುಕೊಂಡು ಹೋಗಿದ್ದಾರೆ.ಆದರೆ ಈ ಭಾಗ ಕೆರೆಗೆ ನೀರಿಲ್ಲ ಇದು ವಿಪರ್ಯಾಸ ಈ ಭಾಗದ ಶಾಸಕರಾಗಲಿ, ಸಂಸದರಾಗಲಿ. ಸಂಬಂದ ಪಟ್ಟ ಇಲಾಖೆಯೂ ಸಹ ಈ ಕೆರೆಗೆ ನೀರು ತುಂಬಿಸುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ .ಕೂಡಲೇ ಕೆರೆಗೆ ನೀರು ತುಂಬಿಸಬೇಕು. ಜೊತೆಗೆ ಕೆರೆಯೂ ಸಹ ಸಾಕಷ್ಟು ಜಾಗ ಒತ್ತುವರಿಯಾಗಿದ್ದು, ಕೆರೆ ಭಾಗಕ್ಕೆ ಕಸದರಾಶಿದಿಂದ ಮುಚ್ಚುವ ಜೊತೆಗೆ ಕೆಲವರು ಒತ್ತುವರಿ ಮಾಡಿಕೊಂಡು ಕೆರೆಯನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ.ಎಂದು ಸಾರ್ವಜನಿಕರ ಆರೋಪವಾಗಿದೆ.ಇನ್ನೂ ಈ ಕೆರೆಯ ಪಕ್ಕದಲ್ಲಿ ರಾಮನಗರ ಜಿಲ್ಲೆಗೆ ಪೈಪ್ ಮೂಲಕ ಕುಡಿಯುವ ನೀರು ಹಾಗೂ ರೈತರ ಜಮೀನಿಗೆ ಹೋಗುತ್ತಿದೆ.ಒಂದು ಹೋಲ್ ಮಾಡಿದರೆ ಸಾಕು ಈ ಕೆರೆ ತುಂಬುತ್ತದೆ ಜೊತೆಗೆ ಈ ಭಾಗದಲ್ಲಿ ಅಂರ್ತಜಲ ವೃದ್ದಿಯಾಗುತ್ತದೆ.ಇದಲ್ಲದೆ ರೈತರ ಜಮೀನಿಗಳಿಗೆ ಸಹ ಅನುಕೂಲವಾಗುತ್ತದೆ.ಕೂಡಲೇ ಸಂಬಂದಪಟ್ಟ ಇಲಾಖೆಯಾಗಲಿ, ಕ್ಷೇತ್ರದ ಶಾಸಕರಾಗಲಿ, ಸಂಸದರಾಗಲಿ, ಗಮನಹರಿಸಿ ಕೆರೆಗೆ ನೀರು ತುಂಬಿಸುವ ಕೆಲಸ ಮಾಡಬೇಕು ಇಲ್ಲದಿದ್ದರೆ ಕೆರೆ ಹೋರಾಟ ಸಮಿತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಚ್ಚರಿಕೆ ನೀಡಿದ್ದಾರೆ.

ವರದಿ- ಎ ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version