ಕೋಲಾರ

ನವಜಾತ ಶಿಶುವನ್ನು ರಸ್ತೆಯಲ್ಲಿ ಎಸೆದು ಹೋದ ಕಿರಾತಕ ತಂದೆ-ತಾಯಿ..!

Published

on

ಕೋಲಾರ: ನವಜಾತ ಹೆಣ್ಣು ಶಿಶುವನ್ನು ರಸ್ತೆಯಲ್ಲಿ ಎಸೆದುಹೋಗಿರುವ ಅಮಾನವೀಯ ಘಟನೆ ಕೋಲಾರ ತಾಲೂಕಿನ ಅಲೇರಿ ಗ್ರಾಮದ ಗೇಟ್ ಬಳಿ ನಡೆದಿದೆ. ಬೆಳ್ಳಗೆ ಜನಿಸಿರುವ ಮುದ್ದಾದ ಮಗವನ್ನು ದುರಾಳರು ಬಟ್ಟೆಯಲ್ಲಿ ಸುತ್ತಿ ಅಲೇರಿ ಗ್ರಾಮದ ಗೇಟ್ ಸಮೀಪ ಬಿಟ್ಟುಹೋಗಿದ್ದಾರೆ, ಮಗು ಆಳುತ್ತಿರುವುದನ್ನು ನೋಡಿದ ಗ್ರಾಮಸ್ಥರು ಸುಗುಟೂರು ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆರೋಗ್ಯ ಕೇಂದ್ರದ ವೈದ್ಯೆ ಡಾ. ಕಾವ್ಯ ಮಗವನ್ನು ರಕ್ಷಣೆ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಆರೋಗ್ಯ ಕೇಂದ್ರದಲ್ಲಿ ಮಗುವಿನ ಆರೈಕೆ ಮಾಡಲಾಗುತ್ತಿದೆ, ಹುಟ್ಟಿದ ಮಗು ಹೆಣ್ಣು ಎಂದು ಕಠೋರ ಹೃದಯದ ಪಾಪಿ ತಂದೆತಾಯಿ ಮಗವನ್ನು ರಸ್ತೆಯಲ್ಲಿ ಎಸೆದುಹೋಗಿರುವ ಶಂಕೆ ವ್ಯಕ್ತವಾಗಿದೆ.ಇನ್ನೂ ಆಧುನಿಕ ಯುಗದಲ್ಲಿ ಪುರುಷನಿಗೆ ಸಮನಾಗಿ ಮಹಿಳೆಯರು ಎಲ್ಲಾ ರಂಗದಲ್ಲಿ ತಾನ್ನ ಚಾಪು ಮೂಡಿಸುತ್ತಿದ್ರು ಹೆಣ್ಣು ಗಂಡು ನಡುವಿನ ಅಸಮಾನತೆ ಮಾತ್ರ ಮುಂದುವರೆದಿರುವುದು ದುರದೃಷ್ಟಕರ, ತನ್ನ ಕರುಳುಬಳ್ಳಿಯನ್ನೇ ಬಿಟ್ಟು ಹೋಗಿರುವ ತಾಯಿಯ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ವರದಿ- ಬೆಟ್ಟಪ್ಪ ಎಕ್ಸ್ ಪ್ರೆಸ್ ಟಿವಿ ಕೋಲಾರ

Click to comment

Trending

Exit mobile version