ಮಂಡ್ಯ

ಆಳುವ ಸರ್ಕಾರಗಳು ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿವೆ- ವಿಶ್ವಕರ್ಮ ಘಟಕದ ಅದ್ಯಕ್ಷ ಶ್ರೀನಿವಾಸ್..!

Published

on

ಮಳವಳ್ಳಿ: ಭಾರತದ ಭವ್ಯ ಸಂಸ್ಕೃತಿ ಉಳಿಯಬೇಕಾದರೇ ನಮ್ಮ ವಿಶ್ವಕರ್ಮ ಸಮಾಜದ ಅಪಾರ ಕೊಡುಗೆ ಇದೆ. ಪಂಚ ಕಸುಬುಗಳನ್ನು ನಂಬಿ ಬದುಕು ನಡೆಸುತ್ತಿದ್ದೇವೆ ಆಳುವ ಸರ್ಕಾರಗಳು ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿವೆ. ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಯುವ ಘಟಕದ ಅದ್ಯಕ್ಷ ಶ್ರೀನಿವಾಸ್ ವಿಷಾದ ವ್ಯಕ್ತಪಡಿಸಿದರು.ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದ ಸಪ್ತಗಿರಿ ಕಲ್ಯಾಣ ಮಂಟಪದ ಆವರಣದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ನಡೆದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಜಕೀಯ ಪಕ್ಷಗಳು ನಮ್ಮ ಮತ ಪಡೆಯುತ್ತಿವೆಯೇ ಹೊರತು ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ. ನಿಗಮ ಮಂಡಳಿ ಸ್ಥಾಪಿಸಿ ಎರಡು ವರ್ಷ ಕಳೆದರೂ ಅಧ್ಯಕ್ಷರನ್ನು ನೇಮಕ ಮಾಡಲು ಮೀನಾ ಮೇಷ ಎಣಿಸಲಾಗುತ್ತಿದೆ ಎಂದು ಆರೋಪಿಸಿದರು.ತಾಲ್ಲೂಕಿನಾದ್ಯಂತ ಹದಿನೆಂಟು ಸಾವಿರ ವಿಶ್ವಕರ್ಮ ಮತದಾರರಿದ್ದು, ಶಾಸಕರನ್ನು ನಿರ್ಣಯ ಮಾಡುವ ಸಾಮರ್ಥ್ಯ ಸಮುದಾಯಕ್ಕಿದೆ. ಇಲ್ಲಿಯವರೆಗೂ ಮಳವಳ್ಳಿ ಶಾಸಕರು ತಾಲ್ಲೂಕು ಕೇಂದ್ರದಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಒಂದು ಭವನ ನಿರ್ಮಿಸಲು ನಿವೇಶನ ನೀಡುತ್ತಿಲ್ಲ ಎಂದು ದೂರಿದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯ ಮುಖಂಡರಾದ ಲೋಹಿತ್ ಕಲ್ಲೂರ, ಟಿ.ಕೆ.ಪುರುಷೋತ್ತಮ್, ಎನ್.ಎಸ್.ರಾಜು, ತಾಲ್ಲೂಕು ಅದ್ಯಕ್ಷ ಸೋಮಶೇಖರ್, ಮಹಿಳಾ ಘಟಕದ ತಾಲ್ಲೂಕು ಅದ್ಯಕ್ಷೆ ಭಾಮಾ, ಹಲಗೂರು ಹೋಬಳಿ ಘಟಕದ ಅದ್ಯಕ್ಷ ಎಂ.ಕುಮಾರ್, ಉಪಾದ್ಯಕ್ಷ ಎಸ್.ರಮೇಶ್ ಸೇರಿದಂತೆ ಹಲವರು ಇದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version