Uncategorized

ಗಾಂಧೀಗಿರಿ ಹೋರಾಟಕ್ಕೆ ಸರ್ಕಾರ ಬಗ್ಗದಿದ್ದರೆ ಉಗ್ರ ಹೋರಾಟಕ್ಕೆ ಅಣಿಯಾಗುತ್ತೆವೆ-ದರ್ಮರಾಜ ವಾಲಿಕಾರ..!

Published

on

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಧಂಡಾಧಿಕಾರಿಯ ಕಛೇರಿಯ ಮುಂಬಾಗದಲ್ಲಿ ಹಮ್ಮಿಕೊಂಡ ೫ ನೇ ದಿನದ ಧರಣಿ ಸತ್ಯಾಗ್ರಹದ ಜನರ ಮನವೊಲಿಕೆ ಪ್ರಯತ್ನ ಪಟ್ಟರು. ಆದರೆ ಧರಣಿ ಸತ್ಯಾಗ್ರಹ ನಿರತ್ತರು ತಿಂಗಳೊಳಗಾಗಿ ಜಾತಿ ಪ್ರಮಾಣ ಪತ್ರ ನೀಡದಿದ್ದರೆ ಬೆಳಗಾವಿ ಹಾಗೂ ಕಲ್ಬುರ್ಗಿ ವಿಭಾಗದ ಮಟ್ಟದ ಆಯಾ ತಾಲೂಕು ಕೇಂದ್ರಗಳಲ್ಲಿ ಆಡಳಿತ ಯಂತ್ರಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಅಡ್ಡಿಪಡಿಸುವ ಹೋರಾಟ ಕೈಗೊಳ್ಳಲಾಗುವುದು ಎಂದು ತಾಲೂಕು ತಳವಾರ, ಪರಿವಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಧರ್ಮರಾಜ ವಾಲಿಕಾರ ಎಚ್ಚರಿಕೆ ಆಗ್ರಹ ಮಾಡಿದರು. ಕೊವಿಡ್-19 ವಿಪರೀತ ಪ್ರಮಾಣದಲ್ಲಿ ನರ್ತನ ಮಾಡುತ್ತಿದ್ದು ಇಂದು ಸರಕಾರದ ಜನ ಪ್ರತಿನಿಧಿಗಳನ್ನ ನುಂಗುತ್ತಿದೆ. ಇಂತಹ ಸಂದರ್ಭದಲ್ಲಿ ಜನ ಸಾಮನ್ಯರಿಗೆ ಹೆಚ್ಚಿನ ತೊಂದರೆಯಾಗುವ ಸಾದ್ಯತೆಯಿಂದ ಸ್ವಲ್ಪ ಅಕ್ಟೋಬರ್ ೧ ರವರೆಗೆ ಕಾಲ ಗಡುವು ಕೂಟ್ಟು ಮುಂದಿನ ಹೋರಾಟಕ್ಕೆ ಮುನ್ನ ಗುತ್ತಿವೆ ಎಂಬ ಸಂದೇಶ ಜಿಲ್ಲಾ ಅಧ್ಯಕ್ಷ ಶರಣಪ್ಪ ಸುಣಗಾರ ತಿಳಿಸಿದ್ದಾರೆ.ಆ ಕಾರಣಕ್ಕಾಗಿ ಸರಕಾರಕ್ಕೆ ಸಮಯ ಅವಕಾಶ ಕೊಟ್ಟು ಧರಣಿ ಸತ್ಯಾಗ್ರಹ ಮುಂದೂಡಲಾಗುತ್ತಿದೆ ಎಂದು ದರ್ಮರಾಜ ವಾಲಿಕಾರ ಹೇಳಿದರು. ಬಿಜೆಪಿ ಜಿಲ್ಲಾ ಉಪಾಧಕ್ಷ ಧಯಾಸಾಗರ ಪಾಟೀಲ್,ದೇವೇಂದ್ರ ಕುಂಬಾರ ವಿಜಯಕುಮಾರ ರಾಠೋಡ,ಮಹೇಶ ಹೂಗಾರ ಮಲ್ಲು ಹಾವಿನಾಳಮಠ ಹಾಗೂ ವಿವಿಧ ಸಮುದಾಯದ ಮುಖಂಡರ ತಳವಾರ ಸಮುದಾಯದ ಹೋರಾಟಕ್ಕೆ ಬೆಂಬಲ ನೀಡಿದರು.

ವರದಿ- ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್ ಇಂಡಿ

Click to comment

Trending

Exit mobile version