ಮಂಡ್ಯ

ಕೂಡಲೇ ಸರ್ಕಾರ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯಬೇಕು- ಡಾ .ಕೆ. ಅನ್ನದಾನಿ..!

Published

on

ಮಳವಳ್ಳಿ : ಭೂ ಸುಧಾರಣೆ ವಿದ್ಯುತ್ ಭೂ ಸುಧಾರಣೆ ವಿದ್ಯುತ್ ಮತ್ತು ಎಪಿಎಂಸಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ರೈತ ಕುಲವನ್ನ ದಿವಾಳಿ ಮಾಡುವ ರಾಜ್ಯ ಸರ್ಕಾರದ ವಿರುದ್ಧ ಬಂದ್ ಗೆ ಶಾಸಕ ಡಾ .ಕೆ. ಅನ್ನದಾನಿ ಬೆಂಬಲಿಸಿ ಕೂಡಲೇ ಸರ್ಕಾರ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.ಪಟ್ಟಣದಲ್ಲಿ ನಡೆದ ಕರ್ನಾಟಕ ಬಂದ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಂದ್ ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ.ಇದರಿಂದ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಎತ್ತಿ ತೋರುತ್ತದೆ, ಸರ್ಕಾರ ಎಚ್ಚೆತ್ತು ಈ ಮಾರಕವಾದ ಕಾಯ್ದೆಯನ್ನು ವಾಪಸ್ಸು ಪಡೆಯಬೇಕೆಂದು ತಿಳಿಸಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಜನ ವಿರೋಧಿ ಕಾಯ್ದೆಯನ್ನು ವಾಪಸ್ಸು ಪಡೆಯದಿದ್ದರೆ ಮುಂದಿನ ದಿನದಲ್ಲಿ ಬೀದಿಗಿಳಿದು ಉಗ್ರವಾದ ಚಳುವಳಿಯನ್ನು ಹಮ್ಮಿ ಕೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದ ಅವರು ರೈತ ಮತ್ತು ಪ್ರಗತಿಪರ ಹೋರಾಟಗಾರರ ಹೋರಾಟಕ್ಕೆ ನಮ್ಮ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು. ಪ್ರಾಂತ ರೈತ ಸಂಘ ಅಧ್ಯಕ್ಷ ಎನ್ ಎಲ್ ಭರತ್ ರಾಜ್ ಮಾತನಾಡಿ. ರೈತರ ಸಮರಧೀರ ಹೋರಾಟದ ಫಲವಾಗಿ ಉಳುವವನೆ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ಬಂದು ಬಡ ಕೃಷಿಕರಿಗೆ ದಲಿತರಿಗೆ ಭೂಮಿ ದೊರಕಿತು ಆದರೆ ಇಂದು ಉಳ್ಳವನೆ ಭೂಮಿಯ ಒಡೆಯ ಎಂಬ ಕಾನೂನನ್ನು ಕೇದ್ರದ ನರೇಂದ್ರ ಮೋದಿ ಹಾಗೂ ರಾಜ್ಯದ ಯಡಿಯೂರಪ್ಪ ನವರ ಬಿಜೆಪಿ ಸರ್ಕಾರ ಯಾವ ಸದನದಲ್ಲೂ ಚರ್ಚಿಸದೆ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತರಲು ಹೊರಟಿದೆ ಎಂದು ಆರೋಪಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಯಿಂದಾಗಿ ಕಾರ್ಪೊರೇಟ್ ಕುಳಗಳಿಗೆ ಅನುಕೂಲವಾಗುತ್ತದೆ ನೂತನ ವಿದ್ಯುತ್ ಕಾಯ್ದೆಗಳಿಂದ ರೈತರ ಪಂಪ್ಸೆಟ್ಗಳಿಗೆ ಬಡವರ ಭಾಗ್ಯಜ್ಯೋತಿ ಕುಟಿರ ಜ್ಯೋತಿಗಳಿಗೆ ಮೀಟರ್ ಅಳವಡಿಸಿ ಬಿಲ್ ನೀಡುತ್ತಾರೆ ಮೊದ ಮೊದಲು ಸಬ್ಸಿಡಿಗಳನ್ನ ನಿಮ್ಮ ಬ್ಯಾಂಕ್ ಖಾತೆಗಳಿಗೆ ಹಾಕುತ್ತೆನೆಂದು ಹೇಳಿ ನಂತರ ಗ್ಯಾಸ್ ಸಬ್ಸಿಡಿಯ ರೀತಿ ಹಂತ ಹಂತವಾಗಿ ಕಡಿತ ಮಾಡುತ್ತಾರೆ ಎಂದು ದೂರಿದರು. ಎಪಿಎಂಸಿ ರೈತರ ಸ್ವಾಯತ್ತತೆ ಸ್ವಾಭಿಮಾನದ ಪ್ರಾತಿನಿಧಿಕ ಸಂಸ್ಥೆ ರೈತರಿಂದ ಆಯ್ಕೆಯಾದ ಪ್ರತಿನಿಧಿಗಳು ಮಾರುಕಟ್ಟೆಯನ್ನು ರೈತರ ಅನುಕೂಲಕ್ಕೆ ತಕ್ಕಂತೆ ನಡೆಸುತ್ತಿದ್ದರು, ಆದರೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಪೊರೇಟ್ ಕಂಪನಿಗಳಾದ ರಿಲೆಯೆನ್ಸ್. ಮೆಟ್ರೋ, ಬಿಗ್ ಬಜಾರ್, ನಂತಹ ಸಂಸ್ಥೆಗಳ ಹಿಡಿತಕ್ಕೆ ಮಾರಕಟ್ಟೆ ನೀಡಿ ರೈತರ ಸಮಾದಿ ಮಾಡಿ ತನ್ನ ಕಪಿಮುಷ್ಟಿಗೆ ಹಿಡಿದುಕೊಂಡು ಸಮಾನ್ಯ ರೈತರಿಗೆ ನ್ಯಾಯಯುತ ಬೆಲೆ ನೀಡದೆ ವಂಚಿಸುತ್ತಾರೆ ರಾಜ್ಯದಲ್ಲಿ 177 ಕೃಷಿ ಉತ್ಪನ್ನ ಮಾರುಕಟ್ಟೆಗಳ ವಹಿವಾಟು ಸ್ಥಗಿತಗೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯರುಗಳಾದ ನಂದಕುಮಾರ್, ನೂರುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ದೇವರಾಜು ಮತ್ತು ಸುಂದರ ರಾಜು, ಜನವಾದಿ ಮಹಿಳಾ ರಾಜ್ಯಾಧ್ಯಕ್ಷೆ ದೇವಿ, ಸಿಐಟಿಯು ಮುಖಂಡರಾದ ರಾಮಕೃಷ್ಣ, ತಿಮ್ಮೇಗೌಡ, ಡಿ ಎಚ್ ಎಸ್ ತಾಲ್ಲೂಕು ಸಂಚಾಲಕ ಶಂಕರ್, ರೈತ ಹೋರಾಟ ಸಂಘದ ಅಧ್ಯಕ್ಷ ಎಳೇವೇಗೌಡ ,ಜೆಡಿಎಸ್ ಯುವ ಅಧ್ಯಕ್ಷ ಚಂದಹಳ್ಳಿ ಶ್ರೀಧರ, ಜಿ ಪಂ ಮಾಜಿ ಸದಸ್ಯ ಜಯರಾಜು ಸುಶೀಲ, ಮಂಜುಳ ಮಾಜಿ ಪುರಸಭೆ ಸದಸ್ಯರಾದ ಮಹಬೂಬ್ ಪಾಷಾ ಇನ್ನು ಮುಂತಾದವರು ಭಾಗವಹಿಸಿದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version