ಮಂಡ್ಯ

ಟಿಎಪಿಸಿಎಂಎಸ್ ಚುನಾವಣೆ ಗೊಂದಲದ ಗೂಡಾಗಿದೆ…!

Published

on

ಮಳವಳ್ಳಿ: ಟಿಎಪಿಸಿಎಂಎಸ್ ಚುನಾವಣೆ ಹಿನ್ನಲೆಯಲ್ಲಿ ಮತದಾರರು ಗುರುತಿನ ಚೀಟಿಗಾಗಿ ಸಾಲು ಸಾಲಾಗಿ ನಿಂತಿದ್ದು,ಸಾಮಾಜಿಕ ಅಂತರವನ್ನು ಕಡೆಗಣಿಸಿದ್ದಾರೆ. ಮತದಾನ ಮಾಡಲು ನೂಕುನೂಗ್ಗಲಿನಲ್ಲಿ ನಿಂತಿದ್ದು ಮತದಾರರ ಪಟ್ಟಿಯಲ್ಲಿ ಕೆಲ ಕಾಲ ಗೊಂದಲ ಸೃಷ್ಟಿಯಾಗಿತ್ತು.ಕಸಬಾ ಹೋಬಳಿ ಮತದಾರರು ಹಾಗೂ ಮಳವಳ್ಳಿ ಟೌನ್ ಮತದಾರರ ಪಟ್ಟಿ ಒಟ್ಟಾಗಿದ್ದು ,ಪಟ್ಟಿಯಲ್ಲಿ ಹೆಸರು ಹುಡುಕಾಟ ನಡೆಸುತ್ತಿರುವುದರಿಂದ ಚುನಾವಣೆ ಗೊಂದಲದ ಗೂಡಾಗಿದೆ.ಇನ್ನೂ ಈ ಗೊಂದಲದಿಂದ ಕೆಲ ಮತದಾರರು ಮತಹಾಕದೇ ಮನೆಗೆ ವಾಪಸ್ಸಾಗಿದ್ದಾರೆ. ಇನ್ನೂ ಚುನಾವಣಾಧಿಕಾರಿ ಹಾಗೂ ತಾಲ್ಲೂಕು ದಂಡಾಧಿಕಾರಿ ಚಂದ್ರಮೌಳಿ ರವರು ವಾಹಿನಿಯೊಂದಿಗೆ ಮಾತನಾಡಿ, ಟಿಎಪಿಸಿಎಂಎಸ್ ನಲ್ಲಿ 3107 ಮತದಾರರಿದ್ದು ನಿನ್ನೆಯವರೆಗೆ ಅಧಿಕೃತ 1175 ಮತದಾರರಿದ್ದು, 1932 ಮಂದಿ ಅನರ್ಹಪಟ್ಟಿ ಇದ್ದು ಅವರು ಉಚ್ಚ ನ್ಯಾಯಾಲಯದಲ್ಲಿ ಮೂರು ಹಂತದಲ್ಲಿ ಪಟ್ಟಿಯ ಮೂಲಕ ಮತದಾನದ ಹಕ್ಕು ಪಡೆದುಕೊಂಡಿದ್ದಾರೆ.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version