ಸಿಂಧನೂರು

ಶೀಘ್ರವಾಗಿ ನೂತನ ನಗರ ಪೋಲಿಸ್ ಠಾಣೆ ಕಟ್ಟಡ ಉದ್ಘಾಟನೆ- ಎಸ್.ಪಿ ನಿಕ್ಕಮ್ ಪ್ರಕಾಶ್ ಅಮ್ರಿತ್..!

Published

on

ಸಿಂಧನೂರು: ಶೀಘ್ರವಾಗಿ ನೂತನ ನಗರ ಪೋಲಿಸ್ ಠಾಣೆ ಕಟ್ಟಡ ಉದ್ಘಾಟನೆ ಮಾಡಲಾಗುತ್ತದೆ ಎಂದು ಎಸ್.ಪಿ ನಿಕ್ಕಮ್ ಪ್ರಕಾಶ್ ಅಮ್ರಿತ್ ಹೇಳಿದರು. ಎಪಿಎಂಸಿ ಯಲ್ಲಿ ಇರುವ ನಗರ ಪೋಲಿಸ್ ಠಾಣೆ ಭೇಟಿ ನೀಡಿದ ಅವರು ಮಾಧ್ಯಮದೊಂದಿಗೆ ಮಾತನಾಡಿ ಹಿಂದೆಯೇ ನಗರ ಪೋಲಿಸ್ ಠಾಣೆಯ ಕಟ್ಟಡ ಉದ್ಘಾಟನೆ ನಿಗದಿ ಮಾಡಲಾಗಿತ್ತು. ಆದರೆ ಗೃಹ ಸಚಿವರಿಗೆ ಹಾಗೂ ಸ್ಥಳೀಯ ಶಾಸಕರಿಗೆ ಕೊರೋನ್ ಪಾಸಿಟಿವ್ ದೃಢಪಟ್ಟ ಕಾರಣ ಮುಂದೂಡಲಾಯಿತು. ಗೃಹ ಸಚಿವರ ದಿನಾಂಕ ವನ್ನು ನಿಗದಿ ಮಾಡಿಕೊಂಡು ಶೀಘ್ರವಾಗಿ ನೂತನ ಪೋಲಿಸ್ ಠಾಣೆಯ ಕಟ್ಟಡ ಉದ್ಘಾಟನೆ ಮಾಡಲಾಗುತ್ತದೆ ಜೊತೆಗೆ ಸಂಚಾರಿ ಪೋಲಿಸ್ ಠಾಣೆಯ ಕಟ್ಟಡ ನಿರ್ಮಾಣ ಮಾಡಲು ಸೂಕ್ತ ಸ್ಥಳವನ್ನು ಪರಿಶೀಲನೆ ನಡೆಸಿದ್ದು.ಸ್ಥಳ ದೊರಕಿದ ನಂತರ ಸಂಚಾರಿ ಪೋಲಿಸ್ ಠಾಣೆಯ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.

ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version