ಮಂಡ್ಯ

ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಮಾಜಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಮೇಲುಗೈ…!

Published

on

ಮಳವಳ್ಳಿ : ಮಳವಳ್ಳಿ ಟಿಎಪಿಸಿಎಂಎಸ್ ಚುನಾವಣೆಯಲ್ಲಿ 13 ಸ್ಥಾನದಲ್ಲಿ 11 ಕಾಂಗ್ರೆಸ್ ಬೆಂಬಲಿತರು ಗೆಲ್ಲುವ ಮೂಲಕ ಮಾಜಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಮೇಲುಗೈ ಸಾಧಿಸಿದ್ದು, ಉಳಿದ 2 ಸ್ಥಾನ ಮಾತ್ರ ಜೆಡಿಎಸ್ ಬೆಂಬಲಿತರು ಗೆದ್ದಿದ್ದು ಇದರಿಂದ ಶಾಸಕ ಡಾ. ಕೆ ಅನ್ನದಾನಿರಿಗೆ ತೀವ್ರ ಮುಖಭಂಗವಾಗಿದೆ. ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಎ ತರಗತಿಯಿಂದ ಕಾಂಗ್ರೆಸ್ ಬೆಂಬಲಿತರಾದ. ಕೆ ಜೆ ದೇವರಾಜು, ಎಂ.ಬಸವರಾಜು, ಲಿಂಗರಾಜು, ಬಸವೇಶ್, ಕೆ.ಎಸ್ ದ್ಯಾಪೇಗೌಡ, ಹನುಮಂತು ಆಯ್ಕೆಯಾಗಿದ್ದರೆ. ಬಿ. ತರಗತಿಯಿಂದ ಕಾಂಗ್ರೇಸ್ ಬೆಂಬಲಿತರಾದ ಬಿಜಿಪುರ ಹೋಬಳಿಯಲ್ಲಿ ಕುಮಾರ್ ಕಸಭಾ ಹೋಬಳಿಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಕುಳ್ಳಚನ್ನಂಕೇಗೌಡರು, ಹಾಗೂ ಮಹಿಳಾ ಕ್ಷೇತ್ರ ಸವಿತ, ಕಿರುಗಾವಲು ಹೋಬಳಿಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಟಿ.ಸಿ ಚೌಡಯ್ಯ, ಪರಿಶಿಷ್ಟಜಾತಿ ಕ್ಷೇತ್ರದಿಂದ ಪ್ರಕಾಶ್ ರವರು ಜಯಶಾಲಿಯಾಗುವ ಮೂಲಕ ಬಿ ತರಗತಿ 5 ಸ್ಥಾನ ಗೆದ್ದರೆ ಇನ್ನೂ ಜೆಡಿಎಸ್ ಬೆಂಬಲಿತರು ಕಿರುಗಾವಲು ಹೋಬಳಿಯ ಮಹಿಳಾ ಕ್ಷೇತ್ರದಿಂದ ಶೋಭ ಮತ್ತು ಮಳವಳ್ಳಿ ಟೌನ್ ನಿಂದ ರಾಜೇಶ್ ಜಯಗಳಿಸಿದ್ದು, ಜೆಡಿಎಸ್ ಪಕ್ಷ ಎರಡು ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ.ಈ ಚುನಾವಣೆ ಸ್ಥಳೀಯ ಚುನಾವಣೆಯಾದರೂ ಮಾಜಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಹಾಗೂ ಶಾಸಕ ಡಾ.ಕೆ ಅನ್ನದಾನಿರವರ ಪ್ರತಿಷ್ಠೆಯ ಚುನಾವಣೆಯಾಗಿತ್ತು. ಕೊನೆಗೆ ಮಾಜಿ ಶಾಸಕ ಪಿ.ಎಂ ನರೇಂದ್ರಸ್ವಾಮಿರವರು ತಮ್ಮ 11 ಬೆಂಬಲಿತರನ್ನು ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಯಶ್ವಸಿಯಾದರೆ. ಇತ್ತ ಶಾಸಕ ಡಾ.ಕೆ ಅನ್ನದಾನಿರವರು ಕೇವಲ2 ಬೆಂಬಲಿತರು ಮಾತ್ರ ಜಯಶಾಲಿಯಾಗಿದ್ದು. ಇದರಿಂದ ತೀವ್ರ ಮುಖಭಂಗವಂತಾಗಿದೆ. ಇನ್ನೂ ಇದೇ ವೇಳೆ ಕಾಂಗ್ರೆಸ್ ಪಕ್ಷದ ಪಟಾಕಿ ಹಚ್ಚಿ ಸಂಭ್ರಮಿಸಿದರು.ಇನ್ನೂ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಂದರ್ ರಾಜ್ ಮಾತನಾಡಿ, ಮಾಜಿ ಶಾಸಕ ನರೇಂದ್ರಸ್ವಾಮಿ ನೇತೃತ್ವದಲ್ಲಿ ಚುನಾವಣೆಯನ್ನು ಗೆಲ್ಲುವ ಮೂಲಕ ಕಾಂಗ್ರೇಸ್ ಮತ್ತೆ ಆಡಳಿತ ಹಿಡಿಯುತ್ತಿದ್ದು, ಇದಕ್ಕೆ ಕೆ.ಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹಾಗೂ ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ನಡೆದಿದೆ ಎಂದರು. ಈ ಗೆಲ್ಲುವೂ ಮುಂಬರುವ ತಾಲ್ಲೂಕು ಪಂಚಾಯಿತಿ ಗ್ರಾ.ಪಂ, ಜಿ.ಪಂ , ಡಿ ಸಿಸಿ ಬ್ಯಾಂಕ್ ಸೇರಿದಂತೆ ಇನ್ನಿತರ ಚುನಾವಣೆಗೆ ಈ ಗೆಲ್ಲುವ ಬುನಾದಿಯಾಗಿದೆ ಎಂದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ..

Click to comment

Trending

Exit mobile version