ತಿಪಟೂರು

ಮಾಸ್ಕ್, ಸಾಮಾಜಿಕ ಅಂತರ ಮರೆತರೆ ಕೊರೊನಾ ಖಚಿತ : ಬಿ.ಸಿ.ನಾಗೇಶ್..!

Published

on

ತಿಪಟೂರು: ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣಹಾಕಲು ಮಾಸ್ಕ್ ನೊಂದಿಗೆ ಸಾಮಾಜಿಕ ಅಂತ ಕಾಯ್ದುಕೊಂಡರೆ ಶೇ 90 ರಷ್ಟು ಕೊರೊನಾ ಬರುವುದಿಲ್ಲ ಇವುಗಳನ್ನು ಮರೆತರೆ ಕೊರೊನಾ ಖಚಿತ ವೆಂದು ಶಾಸಕ ಬಿ.ಸಿ.ನಾಗೇಶ್ ಎಚ್ಚರಿಸಿದರು. ನಗರಸಭೆ ಆವರಣದಲ್ಲಿ ಏರ್ಪಡಿಸಿದ್ದ ಎಲ್ಲಾ ವರ್ತಕರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇದ್ದು ಸಾವುಗಳು ಸಂಭವಿಸುತ್ತಲೇ ಇದೆ, ಇದಕ್ಕೆ ಮುಖ್ಯ ಕಾರಣವೇ ಲಾಕ್ಡೌನ್ ಸಮಯದಲ್ಲಿ ನಾವೆಲ್ಲರೂ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಟ್ಟು ನಿಟ್ಟಾಗಿ ಪಾಲಿಸಿದೆ ಆದರೆ ಈಗ ಅದನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಕೊರೊನಾ ಗ್ರಾಮಾಂತರ ಪ್ರದೇಶಕ್ಕೂ ಕಾಲಿಟ್ಟಿದ್ದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿದ್ದು ಇಂದು ಪಂಚಾಯಿತಿಗಳಲ್ಲಿ 100ರ ಗಡಿ ದಾಟಿದ್ದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ತಿಪಟೂರು ತಾಲ್ಲೂಕು ಕೊರೊನಾದಲ್ಲಿ ತುಮಕೂರುನ್ನು ಬಿಟ್ಟರೆ 2ನೇ ಸ್ಥಾನದಲ್ಲಿದ್ದು ತಾಲ್ಲೂಕಿನಲ್ಲಿ ಕೊರೊನಾದಿಂದ ಒಟ್ಟು 15 ಜನರು ಮೃತರಾಗಿದ್ದು ಮತ್ತೆ ಒಂದೇ ಮನೆಯಲ್ಲಿ ಸಂಖಿತರು ಹೆಚ್ಚಾಗುತ್ತಲಿದ್ದು ಸಾವು ಸಂಭವಿಸುತ್ತಿದೆ ಆದ್ದರಿಂದ ಸಾರ್ವಜನಿಕರು ಕೊರೊನಾದ ಬಗ್ಗೆ ಜಾಗೃತೆವಹಿಸಿವುದರ ಜೊತೆಗೆ ವರ್ತಕರು ಮುಖ್ಯವಾಗಿ ದಿನಸಿ ವರ್ತಕರು ಮಾಲಿಕರ ಆದಿಯಾಗಿ ಕೆಲಸಗಾರರು ಸಹ ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ನೀವು ತಿಳಿಸಿದ ದಿನದಂದು ತಾಲ್ಲೂಕು ಆಸ್ಪತ್ರೆಯಿಂದ ಸಿಬ್ಬಂದಿಯನ್ನು ನಿಯೋಜಿಸ ಪರೀಕ್ಷೆಮಾಡಲಾಗುವುದೆಂದು ತಿಳಿಸಿದರು. ಉಪವಿಭಾಗಾಧಿಕಾರಿ ದಿಗ್ವಿಜಯ್ ಬೋಡ್ಕೆ ಮಾತನಾಡಿ ನಾವು ಎಷ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತೇವೋ ಅಷ್ಟು ಒಳ್ಳೆಯದು. ವರ್ತಕರು ಸಾರ್ವಜನಿಕರಿಗೆ ಮಾಸ್ಕ್ ದರಿಸುವಂತೆ ತಿಳಿಸಿ ಅವರೊಂದಿಗೆ ವ್ಯಾಪಾರಮಾಡಿ ಸಾದ್ಯವಾದಷ್ಟು ಸ್ಯಾನಿಟೈಸೆಷನ್ ಮಾಡಿಸಿ, ಜೊತೆಗೆ ಅಂಗಡಿಗಳ ಮುಂದೆ ಸಾಮಾಜಿಕ ಅಂತರವನ್ನು ಕಾಪಾಡಲು ಗುರುತುಮಾಡಿ ಕೊರೊನಾ ನಿಯಂತ್ರಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಈ ವರ್ಷ ಆರೋಗ್ಯವಾಗಿದ್ದರೆ ಮುಂದಿನ ವರ್ಷದುಡಿಯಬಹುದು ನೆನಪಿಡಿ ಎಂದು ವರ್ತಕರಿಗೆ ತಿಳಿಸಿದರು.ಸಭೆಯಲ್ಲಿ ತಹಸೀಲ್ದಾರ್ ಚಂದ್ರಶೇಖರ್, ಗ್ರಾಮಾಂತರ ವೃತ್ತ ನಿರೀಕ್ಷಕಿ ಜಯಲಕ್ಷಿö್ಮ ಸದಾಶಿವ್, ಪೌರಾಯುಕ್ತ ಉಮಾಕಾಂತ್, ವರ್ತಕರುಗಳು ಹಾಜರಿದ್ದರು.

ವರದಿ-ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Click to comment

Trending

Exit mobile version