ಬೆಳಗಾವಿ

ರಕ್ತದಾನ ಮಹಾದಾನ- ಏಡ್ಸ್ ಪ್ರವೈಷನ್ ಸೊಸೈಟಿ ವತಿಯಿಂದ ರಕ್ತದಾನ ಶಿಬಿರ..!

Published

on

ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ ಬೆಳಗಾವಿ, ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಪ್ರವೆನ್ ಷನ್ ಸೊಸೈಟಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ನಿಮಿತ್ತ ರಕ್ತ ದಾನ ಶಿಬಿರ ನಡೆಯಿತು.ಜಗತ್ತಿನ ಅತಿ ದೊಡ್ಡ ಸಂಶೋಧನೆಯಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಉಪಯೋಗಿಸುವುದು ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ.ರಕ್ತಕ್ಕೆ ವರ್ಷವಿಡೀ ನಿರಂತರವಾಗಿ ಬೇಡಿಕೆ ಇರುತ್ತದೆ. ಯಾಕೆಂದರೆ ಅಪಘಾತಗಳು, ತುರ್ತು ಶಸ್ತ್ರಚಿಕಿತ್ಸೆಗಳ ಸಂದರ್ಭಗಳು, ಸಂಭವಿಸುತ್ತಲೇ ಇರುತ್ತವೆ. ಜೊತೆಯಲ್ಲಿ ಕ್ಯಾನ್ಸರ್ ರೋಗಿಗಳು, ಗರ್ಭಿಣಿ ಸ್ತ್ರೀಯರು, ಥ್ಯಾಲಸೀಮಿಯಾ, ಹಿಮೊಫಿಲಿಯಾ, ಸಿಕಲ್ ಸೆಲ್ ಅನಿಮಿಯಾ ಮುಂತಾದ ರೋಗಿಗಳು ರಕ್ತ ದಾನಿಗಳನ್ನೇ ಅವಲಂಭಿಸಿರುತ್ತಾರೆ. ದೇಶದಲ್ಲಿ ಕೋರೋನಾ ತಾಂಡವವಾಡುತ್ತಿದೆ.ಇದರಿಂದ ಜನರ ಜೀವ ಹೊಗುತ್ತಿದ್ದರು ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಲು ರಕ್ತದಾನ ಮಾಡುತ್ತಿರುವುದು ತುಂಬ ಸಂತೋಷವಾಗುತ್ತಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ (ಡಿ ಎಚ್ ಓ) ಮುನ್ಯಾಳ ರವರು ತಿಳಿಸಿದರು.ಇದೆ ಸಂದರ್ಭದಲ್ಲಿ ಚಿಕ್ಕೋಡಿ ತಹಶೀಲ್ದಾರ್ ಸುಭಾಷ್ ಸಂಪಗಾವಿಯವರು ರಕ್ತ ದಾನ ಮಾಡಿ ರಕ್ತದಾನ ಮಹಾದಾನ ಎಂದು ಹೇಳಿ ಎಲ್ಲರೂ ರಕ್ತ ದಾನ ಮಾಡಿ ಮತ್ತೊಬ್ಬರ ಜೀವ ಉಳಿಸಲಿಕ್ಕೆ ಸಹಕರಿಸಬೇಕೆಂದರು. ಈ ರಕ್ತ ದಾನ ಶಿಬಿರದಲ್ಲಿ ಸುಮಾರು ಒಂದು ನೂರು ಜನ ಸ್ವಯಂ ಪ್ರೇರಿತರಾಗಿ ರಕ್ತ ದಾನ ಮಾಡುತ್ತಾರೆ. ಈ ಶಿಬಿರ ಪ್ರತಿ ವರ್ಷ ನಮ್ಮ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಸುತ್ತಾ ಬಂದಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಎಸ್ ಎಸ್ ಕರಗಾಂವೆ ತಿಳಿಸಿದರು. ಇದೆ ಸಂದರ್ಭದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಮೀನಾಕ್ಷಿ ಕೊಠಿವಾಲೆ ಇವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರೆ, ರಕ್ತ ದಾನ ಮಾಡಲಿಕ್ಕೆ ಪ್ರೇರಣೆ ನೀಡಿದ ಪವನ ಜಿಪರೆ, ಹಾಗೂ ಡಾ. ಅಭಯ ಶಿರಹಟ್ಟಿ ಇವರಿಗೂ ಸಹ ಜಿಲ್ಲಾಡಳಿತ ಪ್ರಶಸ್ತಿ ನೀಡಿ ಗೌರವಿಸಿತು. ಉಪನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ. ಶೈಲಜಾ ತಮ್ಮನ್ನವರು, ಡಿ ಎಚ್ ಓ ಮುನ್ಯಾಳ, ಅಪಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್ ಎಸ್ ಗಡೆದ,ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಅನೀಲ ಕೊರಬು, ತಾಲೂಕು ಆರೋಗ್ಯ ಅಧಿಕಾರಿ ವಿ.ವಿ ಶಿಂಧೆ, ತಹಶೀಲ್ದಾರ್ ಸುಭಾಷ್ ಸಂಪಗಾವಿ, ಮುಖ್ಯ ವೈಧ್ಯಾಧಿಕಾರಿ ಡಾ. ಎಸ್ ಎಸ್ ಕರಗಾಂವೆ ಮುಂತಾದ ಗಣ್ಯರು ಈ ಒಂದು ಶಿಬಿರದಲ್ಲಿ ಪಾಲಗೊಂಡಿದ್ದರು.

ವರದಿ- ಪಿ.ಎಮ್ ಪಾಟೀಲ್ ಎಕ್ಸ್ ಪ್ರೆಸ್ ಟಿವಿ ಬೆಳಗಾವಿ.

Click to comment

Trending

Exit mobile version