ಕಲಬುರಗಿ

ಹೆರಿಗೆ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯದ ಕೊರತೆ- ನೆಲದ ಮೇಲೆ ಗರ್ಭೀಣಿಗೆ ಹೆರಿಗೆ..!

Published

on

ಕಲಬುರಗಿ: ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಸರಸಂಬಾ ಪ್ರಾಥಮಿಕ ಆರೋಗ್ಯ ಕೇಂದ್ರ ಅವಸ್ಥೆಯ ಆಗಲವಾಗಿದ್ದು ಕೂಡಲೇ ಸರಿಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ಥಾರೆ. ಪ್ರತಿ ತಿಂಗಳು ಸುಮಾರು 20 ರಿಂದ 30 ಹೆರಿಗೆ ಆಗುತ್ತಿರುವುದು, ಸದರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಸಂಭಂದಪಟ್ಟ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಸಮಸ್ಯೆಗಳಿವೆ ವಿಶೇಷವಾಗಿ ಹೆರಿಗೆ ಸಮಯದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸದೆ ನೆಲದ ಮೇಲೆ ಹೆರಿಗೆ ಮಾಡಿಸಿದ ಪ್ರಸಂಗ ನಡೆದಿದೆ. ಹೆರಿಗೆ ಬರುವ ಹೆಣ್ಣು ಮಕ್ಕಳಿಗೆ, ಆಗುತ್ತಿರುವ ತೊಂದರೆಗಳನ್ನು ಮನಗಂಡ ಗ್ರಾಮದ ಯವಕರು ಆಸ್ಪತ್ರೆಯ ನಿಸ್ಕಾಳಜಿಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ಥಾರೆ. ಇದನ್ನು ಕಂಡ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಜಿ.ಅಭಯಕುಮಾರ ಆಸ್ಪತ್ರೆಗೆ ಭೇಟಿ ನಿಡಿದಾಗ ಸಮಸ್ಯೆಗಳನ್ನ ಪರಿಹರಿಸಲು ಮನವಿ ಪತ್ರವನ್ನು ಕೊಡಲಾಯಿತು,ಈ ಸಂಧರ್ಭದಲ್ಲಿ ಗ್ರಾಮದ ಯುವಕರಾದ ಕುಮಾರ ಖಾನಾಪುರೆ,ಲಾಲು ಖಾನಾಪೂರೆ, ಮಹೇಶ ಮಾಳಗೆ, ಪ್ರಶಾಂತ ಪೈಲವಾನ, ಶಾಂತಪ್ಪ ಯಳಸಂಗಿ ಬಲಭೀಮ ಗೌಂಡಿ,ಮಲ್ಲಿಕಾರ್ಜುನ ಕುಂಬಾರ, ಸಂತೋಷ ಭಕರೆ, ವಿಜಯಕುಮಾರ್ ಗುಂಜೋಟಿ, ಲಿಂಗರಾಜ ಲವಾರೆ, ರವಿಚಂದ್ರ ಪೈಲವಾನ, ಮಂಜುನಾಥ ಜಿಡಗೆ ಹಾಗೂ ಗ್ರಾಮದ ಇನ್ನೂ ಅನೇಕ ಯುವಕರು ಭಾಗಿ ಇದ್ದರು.

ವರದಿ-ಡಾ.ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಆಳಂದ

Click to comment

Trending

Exit mobile version