Uncategorized

ಗಾಂಧಿಜೀ ಸತ್ಯ ಮತ್ತು ಅಹಿಂಸೆಯ ಮೂಲಕ ಬದುಕಿನ ಚಳವಳಿಯನ್ನು ಆರಂಭಿಸಿದ ಯುಗ ಪುರುಷ..!

Published

on

ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 2 ರಂದು ನಾವು ಗಾಂಧಿ ಜಯಂತಿ ಎಂದು ಆಚರಣೆ ಮಾಡುತ್ತೇವೆ. ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ಮೂಲಕ ಬದುಕಿನ ಚಳವಳಿಯನ್ನು ಆರಂಭಿಸಿದ ಯುಗ ಪುರುಷ, ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ,ಹೀಗೆ ಹಲವಾರು ಹೋರಾಟದ ರೂಪುರೇಷೆಗಳೊಂದಿಗೆ ಹೋರಾಡಿ ಜಯವನ್ನು ತಂದುಕೊಟ್ಟ ಮಹಾತ್ಮ ಗಾಂಧಿಜಿಯವರು ಅವರೊಂದು ವ್ಯಕ್ತಿಯಲ್ಲ ದಿವ್ಯ ವ್ಯಕ್ತಿತ್ವದ ಮಹಾನ್ ಪ್ರತಿಭೆ. ಕೇವಲ ನಮ್ಮ ಜವನಾಂಗಕ್ಕೆ ಮಾತ್ರ ಸೀಮಿತವಲ್ಲ ಇಡೀ ಮಾನವಕುಲಕ್ಕೆ ಮಾರ್ಗದರ್ಶಿಯಾಗಿದ್ದರು. ಮಾನವ ಜನಾಂಗಕ್ಕಿರುವ ಉದ್ಧಾರದ ದಾರಿಯೆಂದರೆ ಅಹಿಂಸೆ ಮತ್ತು ಶಾಂತಿಯುತೆ. ಇಂತಹ ನಡವಳಿಕೆಯ ಮೂಲಕ ಮಾನವೀಯ ಅಂತಃಕರಣವನ್ನು ಜಾಗೃತಿಗೊಳಿಸಿ ನಾಗರಿಕತೆಗೆ ಸವಾಲಾಗಿರುವ ಕೆಡುಕುಗಳನ್ನು ಹೋಗಲಾಡಿಸಿ ಜಗತ್ತಿನಲ್ಲಿ ಶಾಂತಿ ಸೌಹಾರ್ದತೆಯನ್ನು ನೆಲೆಸುವಂತೆ ಮಾಡುವುದು ಮುಖ್ಯ ಉದ್ದೇಶ ಇವರದಾಗಿತ್ತು. ಮೊದಲ ಬಾರಿಗೆ 1915 ರಲ್ಲಿ ಮೇ 8 ರಂದು ಗೋಪಾಲಕೃಷ್ಣ ಗೋಖಲೆ ಅವರ ಸೂಚನೆಯ ಮೇರೆಗೆ ಬೆಂಗಳೂರಿಗೆ ಪತ್ನಿಯ ಜೊತೆ ಗಾಂಧೀಜಿಯವರು ಭೇಟಿ ನೀಡಿದ್ದು ಯಾರೂ ಮರೆಯುವಂತಿಲ್ಲ. ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಸಮಾರಂಭದುದ್ದಕ್ಕೂ ಸತ್ಯ ಅಹಿಂಸೆ ಶಾಂತಿ ಮುಂತಾದ ಸನಾತನ ತತ್ವಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಅವರು ಇತರರಿಗೂ ಅವುಗಳ ಮಹತ್ವ ತಿಳಿಸಿಕೊಟ್ಟುರು. ಈ ಸಮಾಜಕ್ಕೆ ಶಾಪವಾಗಿ ಕಾಡುತ್ತಿದ್ದ ಅಸ್ಪೃಶ್ಯತೆ ನಿವಾರಣೆಗೆ ತಮ್ಮ ಜೀವ ಮಾನವರಿಗೂ ಹೋರಾಟ ಮಾಡಿ ಅಸ್ಪೃಶ್ಯತೆಯನ್ನು ಮೇಲಕ್ಕೆತ್ತಲು ಚಡಪಡಿಸಿದರು..ಮಾನವ ಸಮಾಜದ ಮೌಲ್ಯಗಳಾದ ಪ್ರೇಮ ಶಾಂತಿ ಸರ್ವರ ಸುಖದ ಸಮಗ್ರ ಶಕ್ತಿಗಳನ್ನು ಸಾಧಿಸುವ ಗಾಂಧೀಜಿಯವರ ವಿಚಾರಧಾರೆಗಳನ್ನು ಈ ಯುಗಕ್ಕೆ ನೀಡಿದ ಅಮೂಲ್ಯವಾದ ಕೊಡುಗೆಗಳೇ ಎಂದು ಹೇಳಬಹುದು. ಅವರಿಗೆ ನಿಜಕ್ಕೂ ಪ್ರೇರಣೆಯಾದದ್ದು ಅವರು ಹುಟ್ಟಿ ಬೆಳೆದ ಸುಸಂಸ್ಕೃತಿಯ ಮನೆಯ ವಾತಾವರಣ ವಿಶೇಷವಾಗಿ ಅವರ ತಾಯಿಯ ಜೀವನ ವಿಧಾನ ಜೊತೆಗೆ ಅವರಲ್ಲಿದ್ದ ಧಾರ್ಮಿಕ ಮನೋಭಾವನೆಯ ಪ್ರೇರಣಗೆ ಮೂಲ ಎನ್ನಬಹುದು. ಗಾಂಧೀಜಿಯವರ ಮುಖ್ಯ ಗುಣ ಪಾರದರ್ಶಕತೆ ಹೇಳಿದ್ದನ್ನೇ ಮಾಡುವುದು ಮಾಡಿದ್ದನ್ನೇ ಹೇಳುವುದು ಈ ಒಂದು ವಿಶೇಷ ಗುಣದಿಂದಲೇ ಗಾಂಧೀಜಿಯವರು ಭಾರತದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದರು.ಒಂದು ಕುಟುಂಬವನ್ನು ಹತೋಟಿಯಲ್ಲಿ ಇಡುವ ಕಷ್ಟಕರವಾದ ಸಂದರ್ಭದಲ್ಲಿ ಒಂದೇ ಒಂದು ಕರೆಯಿಂದ ಇಡೀ ದೇಶವನ್ನೇ ಸತ್ಯಾಗ್ರಹಕ್ಕಾಗಿ ಅಣಿ ಮಾಡಿದ್ದರು ಎಂದರೆ ಅವರಲ್ಲಿ ಎಂಥ ಮಹಾನ್ ಶಕ್ತಿ ಇತ್ತು ಎಂಬುದು ಇಲ್ಲಿ ನಾವು ಅರಿತುಕೊಳ್ಳಬೇಕಾಗುತ್ತದೆ. ಗಾಂಧೀಜಿಯವರ ಅಹಿಂಸೆ ಮತ್ತು ಸತ್ಯದ ಬೋಧನೆಗಳು ಯುವಜನತೆಗೆ ತುಂಬುತ್ತಾ ಮುನ್ನಡೆದರು ಗ್ರಾಮೀಣ ಭಾಗದ ಯುವಜನತೆಯ ಬದುಕಿನ ಬಗ್ಗೆ ಅವರ ಏಳ್ಗೆಯ ಬಗ್ಗೆ ಅಪಾರವಾದ ಚಿಂತನೆ ನಡೆಸುತ್ತಾ ಬಂದವರು .ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮೀಣ ಜನರ ಬದುಕು ಸುಧಾರಿಸಲು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಅತ್ಯವಶ್ಯಕ ಎಂಬುದು ಅವರ ವಿಚಾರವಾಗಿತ್ತು ಅದರೊಂದಿಗೆ ಯುವಜನತೆಯೂ ಅದರಲ್ಲಿ ತೊಡಗುವಂತೆ ಪ್ರೇರೇಪಿಸುತ್ತಿದ್ದರು. ಬ್ರಿಟಿಷರ ಆಗಮನದಿಂದ ಗ್ರಾಮೀಣರ ಬದುಕು ಯಾಂತ್ರೀಕರಣದಿಂದಾಗಿ ಅವೆಲ್ಲ ನಶಿಸಿ ಹೋಗುವ ಸಂದರ್ಭದಲ್ಲಿ ಸಣ್ಣ ಕೈಗಾರಿಕೆಗಳು ಹುಟ್ಟು ಹಾಕಿ ಹಳ್ಳಿಗಳ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿದರು. ಹಿಂದೂ ಧರ್ಮದ ಹಾಗೂ ಹಿಂದೂ ಸಮಾಜದ ಉನ್ನತಿಗಾಗಿ ಗಾಂಧೀಜಿ ಅವರ ಕೊಡುಗೆ ಅವಿಸ್ಮರಣೀಯವಾದದ್ದು. ಮಾನವ ಜನಾಂಗವನ್ನು ಹೊಸಕಿ ಹಾಕುವಷ್ಟು ಪ್ರಾಬಲ್ಯ ಪಡೆದಿರುವ ಇಂದಿನ ಕಾಲದಲ್ಲಿ ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿದ ಮಾನವೀಯತೆಯ ಮೌಲ್ಯಗಳು ಅಹಿಂಸಾ ಧರ್ಮ ಸಹೋದರತ್ವ ಮೊದಲಾದ ತತ್ತ್ವಗಳು ಇಂದಿನ ಕಾಲಘಟ್ಟದಲ್ಲಿ ಉತ್ತಮವಾದ ವಾತಾವರಣ ನಿರ್ಮಾಣ ಮಾಡಲು ಪರಸ್ಪರ ಹೃದಯವಂತಿಕೆಯಿಂದ ವರ್ತಿಸುವುದೇ ಮಂತ್ರ ಎಂದು ಜಗತ್ತಿಗೆ ಸಾರುತ್ತಿವೆ.ಹಿಂಸೆಯನ್ನು ದ್ವೇಷದಿಂದ ಎದುರಿಸುವುದಲ್ಲ ಪ್ರೀತಿ ಹಾಗೂ ಸತ್ಯಾಗ್ರಹದಿಂದ ಎಂಬುದು ಗಾಂಧಿ ತತ್ವಗಳು ಎಂಬುದು ನಮ್ಮೆಲ್ಲರಿಗೆ ತೋರಿಸಿಕೊಟ್ಟಿವೆ. ಇಂತಹ ವಿಚಾರಗಳನ್ನು ಜೀವನದಲ್ಲಿ ರೂಢಿಸಿಕೊಂಡು ಸಾಮಾಜಿಕ ರಾಜಕೀಯ ಹಾಗೂ ಆರ್ಥಿಕ ಸಮಸ್ಯೆಗಳ ನಿವಾರಣೆಗೆ ಅವುಗಳನ್ನು ಬಳಸಿಕೊಳ್ಳುವಂತೆ ಸನ್ಮಾರ್ಗವನ್ನು ಹಾಕಿಕೊಟ್ಟಿದ್ದಾರೆ. ಸತ್ಯ ನ್ಯಾಯ ನಿಷ್ಠುರವಾಗಿ ಜೀವನದುದ್ದಕ್ಕೂ ಅಳವಡಿಸಿಕೊಂಡು ಬದುಕಿದ ಸಾರ್ಥಕ ಬದುಕು ಇವರದಾಗಿದೆ ಸತ್ಯದ ಪ್ರತೀಕವಾದ ಈ ಜ್ಯೋತಿ ಎಂದೆಂದೂ ನಂದದ ಜ್ಯೋತಿ ಎಂದು ಮರೆಯಾದ ಮಹಾತ್ಮನಿಗೆ ಕೋಟಿ ನಮನಗಳು.

ವರದಿ- ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ.

Click to comment

Trending

Exit mobile version