ಮೈಸೂರು

ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡನ ಸನ್ನಿಧಿಯಲ್ಲಿ ಮಗು ಅಪಹರಣ..!

Published

on

ಮೈಸೂರು: ಕೆಲ ವರ್ಷಗಳಿಂದ ನಂಜುಂಡೇಶ್ವರನ ದೇವಾಲಯದಲ್ಲಿ ದಿನ ಕಳೆಯುತ್ತಿದ್ದ ಭಿಕ್ಷುಕಿ ಪಾರ್ವತಿ ಎಂಬುವವರ 9 ವರ್ಷದ ಕವಿತಾ ಎಂಬಾ ಹೆಣ್ಣು ಮಗು ಅಪಹರಣವಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿರುವ ನಂಜುಂಡೇಶ್ವರನ ಸನ್ನಿದಿಯಲ್ಲಿ ನಡೆದಿದೆ. ಪಾರ್ವತಿ ಕಳೆದ ಎರೆಡೂ ವರ್ಷದ ಹಿಂದೆಯಷ್ಟೇ ತನ್ನ ಗಂಡು ಮಗುವನ್ನು ಕಳೆದುಕೊಂಡಿದ್ದರು. ಆ ಗಾಯ ಮಾಶುವ ಮುನ್ನವೇ ತನ್ನ ಇನ್ನೊಂದು ಹೆಣ್ಣು ಮಗುವನ್ನು ಕಳೆದುಕೊಂಡು ಕಣ್ಣಿರಿಡುತ್ತಿದ್ದಾರೆ.ನಿನ್ನೆ ಮಧ್ಯಾಹ್ನ ಸಮಯದಲ್ಲಿ ದೇವಾಲಯದ ಮುಂಭಾಗದಲ್ಲಿ ಟೀ ಮಾರುವ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಮಗುವಿನ ಕೈಗೆ ಹತ್ತು ರೂ ನೀಡಿದ್ದ ನಂತರ ನಿನ್ನ ಈ ಹೆಣ್ಣು ಮಗುವನ್ನು ಸಾಕಲು ಬೇರೆಯವರು ಕೇಳುತ್ತಿದ್ದಾರೆ ಕೋಡ್ತಿಯಾ ಎಂದು ಕೇಳಿದ್ದಾರೆ ಇದ್ದರಿಂದ ಆತಂಕಕ್ಕೆ ಒಳಗಾದ ಬಿಕ್ಷುಕಿ ದೇವಾಲಯದ ದೊಡ್ಡ ತೇರಿನ ಬಳಿ ಭಿಕ್ಷೆ ಮಾಡದೇ ತನ್ನ ಮಗುವನ್ನು ಕಾಯ್ದು ಕುಳಿತಿದ್ದಳು. ಆದ್ರೆ ಮಗು ಕೇಳಿದ ಟೀ ಮಾರುವ ಅಪರಿಚಿತ ವ್ಯಕ್ತಿ ಅರ್ಧ ಗಂಟೆ ಕಳೆಯುವುದರೊಳಗಾಗಿ ಮಗು ಮತ್ತು ಆತ ನಾಪತ್ತೆಯಾಗಿದ್ದಾರೆಂದು ನಂಜನಗೂಡಿನ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿ ತನ್ನ ಆಳಲು ತೋಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ನಂಜನಗೂಡು ಪಟ್ಟಣದ ಶ್ರೀಕಂಠ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ. 2 ವರ್ಷಗಳ ಹಿಂದೆ ನಂಜುಂಡೇಶ್ವರನ ಸನ್ನಿಧಿಯಲ್ಲಿ ಗಂಡು ಮಗುವನ್ನು ಕಳೆದುಕೊಂಡಿದ್ದ ಭಿಕ್ಷುಕಿ ಪಾರ್ವತಿಯ ಮಗು ಅಪಹರಣದ ಪ್ರಕರಣವನ್ನು ಎರಡು ವರ್ಷಗಳು ಕಳೆದರೂ ನಂಜನಗೂಡಿನ ಪೊಲೀಸರು ಭೇದಿಸುವಲ್ಲಿ ವಿಫಲರಾಗಿದ್ದಾರೆ. ಧಾರ್ಮಿಕ ಸನ್ನಿಧಿಯಲ್ಲಿ ಎಳೆಯ ಕಂದಮ್ಮಗಳನ್ನು ಕದ್ದೊಯ್ಯುತ್ತಿರುವ ಕಳ್ಳರ ಕೈಚಳಕಕ್ಕೆ ಬೇಡಿ ತೊಡಿಸಲು ಪೊಲೀಸರು ಮುಂದಾಗುವರೇ ಕಾದು ನೋಡಬೇಕಿದೆ. ಈ ಅಹಿತಕರ ಘಟನೆಯಿಂದ ಭಕ್ತರು ಮತ್ತು ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.

ವರದಿ- ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು

Click to comment

Trending

Exit mobile version