ವಿಜಯಪುರ

ರೈತ ವಿರೋದಿ ನೀತಿ ಹಿಂಪಡೆಯಬೇಕೆಂದು ಧರಣಿ ಸತ್ಯಾಗ್ರಹ..!

Published

on

ವಿಜಯಪುರ: ಕಿವಿ, ಕಣ್ಣು, ಹೃದಯವಿಲ್ಲದ ಹಿಟ್ಲರ್ ಸಂಸ್ಕೃತಿವುಳ್ಳ ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತ ವಿರೋದಿ ಕಾಯಿದೆಗಳನ್ನು ಸೃಷ್ಟಿ ಮಾಡಿ ರೈತ ಕುಟುಂಬಕ್ಕೆ ಶೋಷಣೆ ಮಾಡುತ್ತಿವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಆಡಳಿತ ಸರಕಾರದ ವಿರುದ್ಧ ಮಾತಿನ ಸಮರವೇ ಸಾರಿದರು. ವಿಜಯಪುರ ಇಂಡಿ ತಾಲೂಕಿನ ಮಿನಿ ವಿಧಾನಸೌಧದ ಮುಂಬಾಗದಲ್ಲಿ ಮಹಾತ್ಮ ಗಾಂದೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದ ನಿಮಿತ್ಯವಾಗಿ ಹಮ್ಮಿಕೊಂಡಿರುವ “ಕಿಸಾನ್ – ಮಜ್ದೂರ ಬಚಾವ್ ದಿವಸ್ ” ಆಚರಣೆ ಹಾಗೂ ಧರಣಿ ಸತ್ಯಾಗ್ರಹದ ಕಾರ್ಯಕ್ರಮದಲ್ಲಿ ಮಾತಾನಾಡಿದರು.ಕೇಂದ್ರ ಹಾಗೂ ರಾಜ್ಯ ಸರಕಾರದ ಭೂ ಸುಧಾರಣಾ ಹಾಗೂ ಎ.ಪಿ.ಎಮ್.ಸಿ ಕಾಯಿದೆ ತಿದ್ದುಪಡಿ ಮಸೂದೆಗಳನ್ನು ವಿರೋಧಿಸಿ ಇಂಡಿ ಹಾಗೂ ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಸಮತಿ ಆಶ್ರಯದಲ್ಲಿ ಧರಣಿ ಸತ್ಯಾಗ್ರಹದಲ್ಲಿ ನಿರತ್ತರ ಉದ್ದೇಶಿಸಿ ಇಂಡಿ ವಿಧಾನಸಭಾ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಪ್ರಜಾಪ್ರಭುತ್ವ ಮೂಲ ಆಶಯ ಯಾರೂ ಹೋರಾಟ ಮಾಡುತ್ತಾರೊ ಅವರ ಭಾವನೆ ಅರಿಯಬೇಕು. ಇವತ್ತು ದೇಶದಾದ್ಯಂತ ರೈತರು ಹಾಗೂ ವಿವಿಧ ಸಂಘಟನೆಗಳು ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುತ್ತಿದ್ದಾರೆ. ಆದರೆ ಸರಕಾರ ಸ್ಪಂದಿಸುವ ಯಾವ ಗುಣ ಧರ್ಮನೂ ಹೊಂದಿಲ್ಲ ಎಂದು ಹೇಳಿದರು.ಒಂದು ವೇಳೆ ಸರಕಾರ ರೈತರ ಅನಾನುಕೂಲವಾಗುವ ಕರಾಳ ಮಸೂದೆ ಹಿಂಪಡೆಯದಿದ್ದರೆ ರಸ್ತೆ ರುಖೋ ಹಾಗೂ ರೈಲು ರುಖೊ ಚಳುವಳಿ ಮಾಡಲಾಗುವುದು ಎಂದು ಎಚ್ಚರಿಕೆ ಸಂದೇಶ ರವಾನೆ ಮಾಡಿದರು.

ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ

Click to comment

Trending

Exit mobile version