Uncategorized

ಕಾಂಗ್ರೆಸ್ ,ಬಿಜೆಪಿ ಪಕ್ಷ ತೊರೆದು ಇಂದು ನೂರಾರು ಮಂದಿ ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ- ಅಮೀನರೆಡ್ಡಿ..!

Published

on

ಶಹಾಪುರ : ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ಕಾರ್ಯವೈಖರಿಗೆ ಜನರು ಬೇಸತ್ತು ಇಂದು ಜೆಡಿಎಸ್ ಪಕ್ಷಕ್ಕೆ ನೂರಾರು ಕಾರ್ಯಕರ್ತರು ಸೇರುತ್ತಿರುವುದು ನಿಜಕ್ಕೂ ನನಗೆ ಸಂತೋಷ ತಂದಿದೆ ಎಂದು ಜೆಡಿಎಸ್ ಪಕ್ಷದ ಯುವ ಮುಖಂಡರಾದ ಅಮೀನರೆಡ್ಡಿ ಪಾಟೀಲ್ ಯಾಳಗಿ ಹೇಳಿದರು. ತಾಲೂಕಿನ ಸಗರ ಗ್ರಾಮದಲ್ಲಿ ಏರ್ಪಡಿಸಿರುವ ನಾನಾ ಪಕ್ಷಗಳು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರುತ್ತಿರುವ ಕಾರ್ಯಕರ್ತರನ್ನು ಸ್ವಾಗತಿಸಿ ಮಾತನಾಡಿದ ಅಮೀನರೆಡ್ಡಿ ಇಲ್ಲಿ ಯಾರಿಗೂ ಹೆದರಬೇಕಾಗಿಲ್ಲ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು ಎಲ್ಲರಿಗೂ ಬದುಕುವ ಹಕ್ಕಿದೆ ಯಾವ ಗೂಂಡಾಗಿರಿಗೂ ತಲೆ ಕೆಡಿಸಿಕೊಳ್ಳಬೇಡಿ ನಿಮ್ಮೊಂದಿಗೆ ಸದಾ ನಾನಿದ್ದೇನೆ ಎಂದು ಕಾರ್ಯಕರ್ತರಲ್ಲಿ ಧೈರ್ಯ ತುಂಬಿದರು. ಯುವ ಮುಖಂಡರಾದ ತಿರುಪತಿ ಹತ್ತಿಕಟಿಗಿ ಮಾತನಾಡಿ ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಯುವ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು. ಜೆಡಿಎಸ್ ಪಕ್ಷ ಸ್ವಾಭಿಮಾನಿ ಪಕ್ಷವಾಗಿದ್ದು ಬಡವರ ಹಾಗೂ ದೀನ-ದಲಿತರ ಪರವಾಗಿದೆ. ಆದ್ದರಿಂದ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಪಕ್ಷದ ತತ್ವ ಸಿದ್ಧಾಂತಗಳಿಗೆ ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಮನವಿ ಮಾಡಿ ಸಲಹೆ ನೀಡಿದರು. ಜೆಡಿಎಸ್ ಪಕ್ಷದ ಹಿರಿಯ ಮುಖಂಡರು ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಂದಪ್ಪ ಸೇರಿ ನೇತೃತ್ವದಲ್ಲಿ ಇಂದು ನೂರಾರು ಜನರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಜೆಡಿಎಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಆಯಾ ವಾರ್ಡ್ ಗಳಲ್ಲಿ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗಣ್ಣ ಜಾಯಿ,ಶಿವಶರಣ ಕೂಡ್ಲೂರು,ಮಲ್ಲಪ್ಪ ಬಸಾ, ಭೀಮರಾಯ ಜಾಯಿ,ತಿಪ್ಪಣ್ಣ ಕೂಡ್ಲೂರು,ಸಾಯಿಬಣ್ಣ ಜಾಯಿ, ಮಾರ್ತಾಂಡ ನಂದಿಕೋಲ, ಬನ್ನಪ್ಪಗೌಡ ಪೊಲೀಸ್ ಪಾಟೀಲ್, ಜಗನ್ನಾಥ ಪತ್ತಾರ್, ಯಮನಪ್ಪ ಸುಗೂರ, ಹೊನ್ನಪ್ಪ ಚೆನ್ನೂರು, ಹಾಗೂ ಇತರರು ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಬಸವರಾಜಪ್ಪಗೌಡ ವಿಭೂತಿಹಳ್ಳಿ, ಬಸನಗೌಡ ಹಾರಣಗೇರಾ,ಶರಣಗೌಡ ಮಾಲಹಳ್ಳಿ, ಚನ್ನಪ್ಪ ಕರ್ಕಳ್ಳಿ, ಭೀಮರಾಯ ಸೇರಿ ನಾಗಣ್ಣ ಜಾಯಿ, ಗುರು ಸಜ್ಜನ್, ಇಲಿಯಾಸ್ ಪಾನ್ ಸುಪಾರಿ, ತಿರುಪತಿ ಸೇರಿ,ಸಾಯಬಣ್ಣ ಸಿದ್ರಾ, ಲಕ್ಷ್ಮಣ ಊರುಕಾಯಿ, ಬಾಗಪ್ಪ ಗುಡ್ಡಳ್ಳಿ, ರಹೀಂ ಚೌಧರಿ, ಮಲ್ಲಪ್ಪ ಕೂಡ್ಲೂರ, ಹಾಗೂ ಇತರರು ಉಪಸ್ಥಿತರಿದ್ದರು.

ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Click to comment

Trending

Exit mobile version