Uncategorized

ಹತ್ರಾಸ್ ನಲ್ಲಿ ಮೋನಿಷಾ ವಾಲ್ಮೀಕಿ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ..!

Published

on

ಮಳವಳ್ಳಿ : ಉತ್ತರಪ್ರದೇಶದ ಹತ್ರಾಸ್ನಲ್ಲಿ ಕುಮಾರಿ ಮೋನಿಷಾ ವಾಲ್ಮೀಕಿ ಮೇಲೆ ಅತ್ಯಾಚಾರ ವೆಸಗಿ ಅಮಾನುಷವಾಗಿ ಹಲ್ಲೆ ಮಾಡಿ ಸಾವಿಗೆ ಕಾರಣರಾದ ಆತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಹಾಗೂ ಆಧಿತ್ಯಯೋಗಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಒತ್ತಾಯಿಸಿ ಡಾ. ಅಂಬೇಡ್ಕರ್ ವಿಚಾರ ವೇದಿಕೆ, ಬೌದ್ಧ ಮಹಾ ಸಭಾ ಮತ್ತು ಗಂಗಾ ಮತಸ್ಥರು ಹಾಗೂ ವಿವಿಧ ಜನಪರ ಸಂಘಟನೆಗಳು ಮಳವಳ್ಳಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು ಮಳವಳ್ಳಿಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಿಂದ ಹೊರಟ ಪ್ರತಿಭಟನಾಕಾರರು ಪ್ರಮುಖಬೀದಿಗಳ ಮೂಲಕ ಅನಂತ್ ರಾಮ್ ವೃತ್ತದಲ್ಲಿಮಾನವ ಸರಪಳಿ ನಿರ್ಮಿಸಿ ದಿಕ್ಕಾರದ ಘೋಷಣೆಯೊಂದಿಗೆ ಯು.ಪಿ. ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ರವರ ಭಾವಚಿತ್ರವನ್ನು ಪ್ರತಿಕೃತಿ ದಹಿಸಿ, ತಾಲ್ಲೂಕು ಕಚೇರಿಗೆ ತೆರಳಿ ಶಿರಸ್ತೇದಾರ್ ಚನ್ನವೀರಭದ್ರಪ್ಪ ರವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜಿ ಪುರಸಭಾ ಸದಸ್ಯ, ಡಾ.ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ತಾಲ್ಲೂಕು ಬೌದ್ಧ ಮಹಾಸಭಾ ಅಧ್ಯಕ್ಷ ಎಂ.ಆರ್.ಮಹೇಶ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ನಿರಂತರವಾಗಿ ದಲಿತರ ಮೇಲೆ ಹಲ್ಲೆ ಅತ್ಯಾಚಾರಗಳು ನಡೆಯುತ್ತಿದ್ದು, ಕುಮಾರಿ ಮೋನಿಷಾ ವಾಲ್ಮೀಕಿ ಸಹೋದರಿಯ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿ ಬರ್ಬರವಾಗಿ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣರಾದ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಎಂದು ಆಗ್ರಹಿಸಿ ಆಡಳಿತ ನಿಷ್ಕ್ರೀಯವಾಗಿರುವ ಆಧಿತ್ಯನಾಥ್ ಯೋಗಿ ಸರ್ಕಾರವನ್ನು ವಜಾಗೊಳಿಸುವಂತೆ ರಾಷ್ಟ್ರಪತಿ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಮಾಜಿ ಪುರಸಭಾ ಸದಸ್ಯ ಗಂಗಾಧರ್ ಮಾತನಾಡಿ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಹಾಡು ಹಗಲಿನಲ್ಲಿ ಮೋನಿಷಾ ವಾಲ್ಮೀಕಿ ಮೇಲೆ ಅತ್ಯಾಚಾರ ಎಸಗಿ, ಅಮಾನುಷವಾಗಿ ಹಲ್ಲೆ ನಡೆಸಿ ಸಾವಿಗೆ ಕಾರಣರಾದ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ, ಅಲ್ಲಿನ ಸರ್ಕಾರವನ್ನು ವಜಾ ಗೊಳಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ, ಬಿ ಎಂ, ಕಾಂತರಾಜು, ದುಗ್ಗನಹಳ್ಳಿ ನಾಗರಾಜ್, ಪುರಸಭೆ ಮಾಜಿ ಸದಸ್ಯ ನಾರಾಯಣ, ಮಹಬೂಬ್ ಪಾಷಾ, ಭರತ್ ರಾಜ್, ಮಂಜು, ಬಸವರಾಜು, ಜಿ ಪಂ ಮಾಜಿ ಸದಸ್ಯ ಎಂ ಎನ್ ಜಯರಾಜು,ಎಂ ಆರ್ ಪ್ರಸಾದ್, ಯತೀಶ್, ಶಿವಣ್ಣ ಇತರರು ಭಾಗವಹಿಸಿದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version