ಮೈಸೂರು

ನಂಜನಗೂಡಿನ ಜೆನಿತ್ ಟೆಕ್ಸ್ ಟೈಲ್ ಕಾರ್ಖಾನೆ ಬಂದ್ –ಕಾರ್ಮಿಕರಿಂದ ಪ್ರತಿಭಟನೆ..!

Published

on

ನಂಜನಗೂಡು: ನಂಜನಗೂಡಿನ ಜೆನಿತ್ ಟೆಕ್ಸ್ ಟೈಲ್ ಕಾರ್ಖಾನೆ ಮುಂಬಾಗದಲ್ಲಿ ಸಿಐಟಿಯು ಸಂಘಟಕರು ಮತ್ತು ಕಾರ್ಖಾನೆಯ ಕಾರ್ಮಿಕರಿಂದ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆನಿತ್ ಟೆಕ್ಸ್ ಟೈಲ್ ಕಾರ್ಖಾನೆಯನ್ನು ನಂಬಿ ಸಾವಿರಾರು ಕಾರ್ಮಿಕ ಕುಟುಂಬಗಳು ಕೆಲಸಕ್ಕೆ ಬದುಕುತ್ತಿದ್ದವು ಆದ್ರೆ ಈಗಾ ಇದ್ದಕ್ಕಿದ್ದಂತೆ ಕಾರ್ಖಾನೆಯ ಮಾಲೀಕರು ಕಾರ್ಮಿಕರಿಗೆ ತಿಳಿಯದ ಹಾಗೆ ರಾತ್ರೋರಾತ್ರಿ ಕಾರ್ಖಾನೆಯನ್ನು ಬಂದ್ ಮಾಡಿದ್ದಾರೆ. ಕಾರ್ಖಾನೆಯ ಬಂದ್ ನಿಂದಾಗಿ ಅದನ್ನೇ ನಂಬಿ ಬದುಕುತ್ತಿದ್ದ ಕುಟುಂಬಗಳು ಬೀದಿಪಾಲಾಗಿದ್ದಾರೆ ಎಂದು ಆರೋಪಿಸಿ ಕಾರ್ಖಾನೆಯ ಮುಂಭಾಗದಲ್ಲಿ ಮಾಲೀಕರು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಪ್ರತಿಭಟನಾ ಸ್ಥಳಕ್ಕೆ ನಂಜನಗೂಡಿನ ತಹಸೀಲ್ದಾರ್ ಮಹೇಶ್ ಕುಮಾರ್ ತೆರಳಿ ಸವಿವರವಾದ ಮಾಹಿತಿ ಪಡೆದರು. ಇದೇ ತಿಂಗಳು ಕಾರ್ಖಾನೆಯ ಮಾಲೀಕರು ಜೊತೆಗೂಡಿ ಮಾತುಕತೆಯಾಡಿ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇವೆ ಆತಂಕಬೇಡ ಪ್ರತಿಭಟನೆಯನ್ನು ಹಿಂಪಡೆಯಿರಿ ಎಂದು ತಾಸಿಲ್ದಾರ್ ಮಹೇಶ್ ಕುಮಾರ್ ಪ್ರತಿಭಟನಾ ನಿರತ ಕಾರ್ಮಿಕರಿಗೆ ತಿಳಿಸಿದರು. ಅವರ ಭರವಸೆ ಮೇರೆಗೆ ಕಾರ್ಮಿಕ ಸಂಘಟಕರು ಮತ್ತು ಕಾರ್ಖಾನೆಯ ಕಾರ್ಮಿಕರು ಪ್ರತಿಭಟನೆ ಹಿಂಪಡೆದರು.

ವರದಿ-ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು

Click to comment

Trending

Exit mobile version