ಹುಬ್ಬಳ್ಳಿ-ಧಾರವಾಡ

ರಿಪಬ್ಲಿಕನ್ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಪ್ರಧಾನ ಕಚೇರಿ ಉದ್ಘಾಟನೆ- ರಾಜ್ಯಾಧ್ಯಕ್ಷ ಡಾ ವೆಂಕಟ್ ಸ್ವಾಮಿ..!

Published

on

ಹುಬ್ಬಳ್ಳಿ: ರಿಪಬ್ಲಿಕನ್ ಆಫ್ ಇಂಡಿಯಾ ಪಕ್ಷದ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿಂದು ಪಕ್ಷದ ಜಿಲ್ಲಾ ಪ್ರಧಾನ ಕಚೇರಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಡಾ ವೆಂಕಟ್ ಸ್ವಾಮಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ನಗರದ ಚಟ್ನಿ ಕಾಂಪ್ಲೆಕ್ಸ್ ನಲ್ಲಿ ಪಕ್ಷದ ಕಾರ್ಯಾಲಯ ಉದ್ಘಾಟನೆ ಸಮಾರಂಭದಲ್ಲಿ ನೂರಾರು ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಂಡರು. ನಂತರ ಮಾತನಾಡಿದ ರಿಪಬ್ಲಿಕನ್ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಡಾ.ವೆಂಕಟ್ ಸ್ವಾಮಿ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ್ 1956 ರಲ್ಲಿ ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದರು, ಈಗ ಪಕ್ಷಕ್ಕೆ ಸ್ಥಾಪನೆಯಾಗಿ 65 ವರ್ಷಗಳಾಗಿವೆ. ಸಂವಿಧಾನ ತತ್ವಗಳು,ಹಾಗೂ ಆದರ್ಶ ಪಾಲಿಸುವ ಪಕ್ಷ ರಿಪಬ್ಲಿಕನ್ ಪಕ್ಷ ದೇಶದಲ್ಲಿ ರಾಜ್ಯದಲ್ಲಿ ಎಲ್ಲಾ ಪಕ್ಷದ ದುರಾಡಳಿತ ನೋಡಿದ ಜನತೆ ಈಗ ರಿಪಬ್ಲಿಕನ್ ಆಪ್ ಇಂಡಿಯಾ ಪಕ್ಷಕ್ಕೆ ಬೆಂಬಲ ನೀಡಲು ಸನ್ನದರಾಗಿದ್ದರೆ. ಈ ಬಾರಿಗೆ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಎಲ್ಲಾ ಲಕ್ಷಣಗಳು ಇವೆ. ಆದ್ದರಿಂದ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಮಾಡುತ್ತಿದೆವೆ, ಹು-ಧಾ ಮಹನಾಗರ ಪಾಲಿಕೆ ಚುನಾವಣೆಯಲ್ಲಿ ಕನಿಷ್ಟ 20 ವಾರ್ಡ್ ಗಳಲ್ಲಿ ನಮಗಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಮೂಲಕ ಪಾಲಿಕೆಯಲ್ಲಿ ಅಧಿಕಾರ ನಡೆಸುವ ಭರವಸೆಯನ್ನು ಕಾರ್ಯಕರ್ತರಿಗೆ ನೀಡುತ್ತೆನೆ ಎಂದರು. ಇನ್ನೂ ಪಕ್ಷದ ಧಾರವಾಡ ಜಿಲ್ಲಾ ಮಹನಾಗರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ ಪಕ್ಷದ ಸಂಘಟನೆಗೆ ಎಲ್ಲಾ ಸಿದ್ದತೆ ಮಾಡಲಾಗಿದೆ, ಪಕ್ಷದ ತತ್ವಗಳ ಆಧಾರ ಮೇಲೆ ಕಾರ್ಯಕರ್ತರ ಹಾಗೂ ರಾಜಾಧ್ಯಕ್ಷರು ನೇತೃತ್ವದಲ್ಲಿ ಪಕ್ಷವನ್ನು ಜಿಲ್ಲೆಯಲ್ಲಿ ಅಧಿಕಾರಕ್ಕೆ ತರುವುದರ ಮೂಲಕ ಪಕ್ಷವನ್ನು ಜಿಲ್ಲೆಯಲ್ಲಿ ಗಟ್ಟಿಗೊಳಿಸುವುದಾಗಿ ತಿಳಿಸಿದರು. ಇನ್ನೂ ಸಮಾರಂಭದಲ್ಲಿ ನೂರಾರು ಕಾರ್ಯಕರ್ತರು ,ಮತ್ತು ಪದಾಧಿಕಾರಿಗಳು ಭಾಗಿಯಾಗಿದ್ದರು.

ವರದಿ- ರಾಜು ಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version