Uncategorized

ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರೋಧಿಸಿ ಪ್ರತಿಭಟನೆ..!

Published

on

ನಾಗಮಂಗಲ: ಜನಪರವಾದ ಆಡಳಿತ ದೃಷ್ಟಿಯಿಂದ ವಿಂಗಡಣೆಯಾಗಿದ್ದ ಕೃಷಿ ಸಂಬಂಧಿತ ಕೆಲ ಇಲಾಖೆಗಳನ್ನು ಒಟ್ಟುಗೂಡಿಸುವ ಅವೈಜ್ಞಾನಿಕ ಪ್ರಯತ್ನ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನಡೆ, ಇದೀಗ ಅಗತ್ಯ ಇಲಾಖೆಗಳನ್ನು ಖಾಸಗೀಕರಣಗೊಳಿಸುತ್ತಿರುವುದು ರೈತಾಪಿ ವರ್ಗ ಮಾತ್ರವಲ್ಲದೇ ಸರ್ಕಾರಿ ನೌಕರರ ಆಕ್ರೋಶಕ್ಕೂ ಕಾರಣವಾಗುತ್ತಿದೆ.ಮೈಸೂರು ವಿಭಾಗದ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮದ ಮಂಡ್ಯ ಜಿಲ್ಲೆ, ನಾಗಮಂಗಲ ಉಪವಿಭಾಗದ ವಿದ್ಯುತ್ ಇಲಾಖೆ ನೌಕರರು ಕಪ್ಪುಪಟ್ಟಿ ಧರಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ನೌಕರರ ಸಂಘದ ನಿರ್ದೇಶಕ ನಾಗರಾಜ್, ಈ ದೇಶದ ಬೆನ್ನೆಲುಬು ರೈತನ ನೀರಾವರಿ ಪಂಪ್ ಸಟ್ ಗಳಿಗೆ ಮೀಟರ್ ಅಳವಡಿಸುವ ಮೂಲಕ ಉದ್ಯಮಿಗಳ ಬೆಂಬಲಕ್ಕೆ ನಿಂತಿರುವ ಸರ್ಕಾರ ಸುಗ್ರೀವಾಜ್ಞೆ ತರುವ ಮೂಲಕ ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುತ್ತಿದೆ. ಇಂತಹ ಅವೈಜ್ಞಾನಿಕ ಕಾಯ್ದೆಯಿಂದ ಲಕ್ಷಾಂತರ ನೌಕರರ ಬದುಕು ಬೀದಿಗೆ ಬೀಳಲಿದೆ. ಈ ಹಿಂದೆ ಇದೇ ವಿಷಯವಾಗಿ ಪ್ರತಿಭಟನೆ ಮಾಡಲಾಗಿತ್ತು. ಆದಾಗ್ಯೂ ಸರ್ಕಾರ ಖಾಸಗೀರಣದ ನಿರ್ಧಾರವನ್ನು ಬದಲಾಯಿಸಿಲ್ಲ. ಈ ಕೂಡಲೆ ಖಾಸಗೀಕರಣ ಕಾಯ್ದೆ ಹಿಂಪಡೆಯುವ ಮೂಲಕ ರೈತರ ಮತ್ತು ವಿದ್ಯುತ್ ಇಲಾಖೆಯ ನೌಕರರ ಹಿತಕಾಯಬೇಕು. ಇಲ್ಲವಾದಲ್ಲಿ ಹೋರಾಟದ ಸ್ವರೂಪ ತೀವ್ರಗೊಳ್ಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ನೌಕರರ ಸಂಘದ ನಿರ್ದೇಶಕ ಕುಮಾರ್, ಜವರೇಗೌಡ, ಹರೀಶ್, ಬೀರಪ್ಪ, ದಿಲೀಪ್ ಹಾಗೂ ಲೋಕೇಶ್ ಸೇರಿದಂತೆ 150 ಕ್ಕೂ ಹೆಚ್ಚು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವರದಿ- ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Click to comment

Trending

Exit mobile version