ಮೈಸೂರು

ತುಕ್ಕು ಹಿಡಿಯುತ್ತಿರುವ ವಿದ್ಯುತ್ ಟ್ರಾನ್ಸ್ ಫಾರಂಗಳು- ಸರ್ಕಾರದ ವಿರುದ್ದ ರೈತರ ಆಕ್ರೋಶ ..!

Published

on

ನಂಜನಗೂಡು: ಫಲಾನುಭವಿ ರೈತರಿಗೆ ಸೇರಬೇಕಾದ ವಿದ್ಯುತ್ ಟ್ರಾನ್ಸ್ ಫಾರಂಗಳು ತುಕ್ಕು ಹಿಡಿಯುತ್ತಿದ್ದು, ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ಅಧಿಕಾರವಧಿಯ ಫಲಾನುಭವಿಗಳಿಗೆ ವಿದ್ಯುತ್ ಟ್ರಾನ್ಸ್ ಫಾರಂಗಳು ದಕ್ಕದೆ ತುಕ್ಕು ಹಿಡಿಯುತ್ತಿವೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಯೋಜನೆಯಂತೆ ಫಲಾನುಭವಿ ರೈತರಿಗೆ ತಲುಪಬೇಕಾದ ಟ್ರಾನ್ಸ್ ಫಾರ್ಮರ್ ಗಳು ಅಧಿಕಾರಿಗಳ ನಿರ್ಲಕ್ಷ್ಯತೆಗೆ ಮೂಕ ಸಾಕ್ಷಿಯಾಗಿವೆ. ನಂಜನಗೂಡಿನ ನೀರಾವರಿ ಇಲಾಖೆ ಕಚೇರಿಯಲ್ಲಿ ತುಕ್ಕು ಹಿಡಿಯುತ್ತಿದ್ದರೂ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.ಎಸ್ ಸಿ ಪಿ ಮತ್ತು ಟಿಎಸ್ಪಿ ಯೋಜನೆಯಡಿಯಲ್ಲಿ ರೈತರಿಗೆ ಟ್ರಾನ್ಸ್ ಫಾರಂಗಳನ್ನ ನೀಡಬೇಕಿತ್ತು. ನಾಲ್ಕು ವರ್ಷಗಳ ಹಿಂದೆ ಫಲಾನುಭವಿಗಳನ್ನೂ ಸಹ ಆಯ್ಕೆ ಮಾಡಲಾಗಿತ್ತು.ನಂಜನಗೂಡು ಪಟ್ಟಣದ ಕಾವೇರಿ ನೀರಾವರಿ ನಿಗಮ ಇಲಾಖೆಯ ಕಚೇರಿಗೆ ಟ್ರಾನ್ಸ್ ಫಾರಂಗಳು ಬಂದು ತಲುಪಿದರೂ ಫಲಾನುಭವಿ ರೈತನ ಕೈ ಸೇರುತ್ತಿಲ್ಲ. 2015-16 ಮತ್ತು17-18 ರಲ್ಲಿ ಆಯ್ಕೆಯಾಗಿರುವ ಫಲಾನುಭವಿ ರೈತರಿಗೆ ಟ್ರಾನ್ಸ್ ಫಾರಂಗಳ ನ್ನ ನೀಡಬೇಕಿತ್ತು. ಕಬಿನಿ ಮತ್ತು ನಗು ನಾಲೆಗಳ ಅಂಚಿನಲ್ಲಿರುವ ರೈತರ ಗದ್ದೆಗಳಿಗೆ ವಿಶೇಷ ಅನುದಾನದಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ಸುಮಾರು ಐದು ನೂರಕ್ಕೂ ಅಧಿಕ ರೈತರ ಗದ್ದೆಗಳಿಗೆ ಕೊಳವೆಬಾವಿ ಯೋಜನೆ ಅಡಿಯಲ್ಲಿ ರೈತ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು.ಇದರಲ್ಲಿ ಸಾಕಷ್ಟು ರೈತರ ಗದ್ದೆಗಳಿಗೆ ಕೊಳವೆಬಾವಿ ಕೊರೆಸಿದ ಬಳಿಕ ವಿದ್ಯುತ್ ಸಂಪರ್ಕ ಕಲ್ಪಿಸಿ ಟ್ರಾನ್ಸ್ ಫಾರಂಗಳನ್ನು ನೀಡಬೇಕಿತ್ತು.ಆದರೆ ದುರಂತ ನಾಲ್ಕೈದು ವರ್ಷಗಳು ಕಳೆದರು ಅಧಿಕಾರಿಗಳು ಯಾವ ಉದ್ದೇಶಕ್ಕಾಗಿ ರೈತರಿಗೆ ಟ್ರಾನ್ಸ್ ಫಾರಂ ನೀಡಿಲ್ಲ ಎಂಬುದು ಅನುಮಾನಕ್ಕೆ ಕಾರಣವಾಗಿದೆ.ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ನಾಲ್ಕೈದು ವರ್ಷಗಳಿಂದಲೂ ರೈತರು ತಮ್ಮ ಗದ್ದೆಗಳಲ್ಲಿ ಯೋಜನೆಯ ಅನುಕೂಲವನ್ನು ಪಡೆದುಕೊಂಡಿಲ್ಲ ಎಂಬ ಅರೋಪ ಕೇಳಿಬಂದಿದೆ. ಕೂಡಲೇ ಎಚ್ಚೆತ್ತು ತುಕ್ಕು ಹಿಡಿಯುತ್ತಿರುವ ಟ್ರಾನ್ಸ್ ಫಾರಂಗಳನ್ನು ಕೂಡಲೇ ರೈತರಿಗೆ ಕಲ್ಪಿಸಿ ಕೊಡದಿದ್ದರೆ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ದಸಂಸ ಮುಖಂಡ ಎಚ್ಚರಿಕೆ ನೀಡಿದ್ದಾರೆ. ರೈತ ಮುಖಂಡರುಗಳ ಜೊತೆಗೂಡಿ ಪ್ರತಿಭಟನೆಗೆ ಸಜ್ಜಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವರದಿ- ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು

Click to comment

Trending

Exit mobile version