ಮೈಸೂರು

ನಂಜನಗೂಡು ದೇವಾಲಯದಲ್ಲಿ ಕಳುವಾಗಿದ್ದ ಹೆಣ್ಣು ಮಗು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಪೋಲಿಸರು..!

Published

on

ನಂಜನಗೂಡು: ಮೂರು ದಿನಗಳ ಹಿಂದೆ ನಂಜುಂಡೇಶ್ವರನ ದೇವಾಲಯದ ಮುಂಭಾಗದಲ್ಲಿ ಅಪಹರಣವಾಗಿದ್ದ ಮಗು ಕೊನೆಗೂ ಪತ್ತೆ ಹಚ್ಚುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಕೆಆರ್ ನಗರ ಮೂಲದ ಪಾರ್ವತಿ ಎಂಬಾಕೆಯ ಮೂರು ವರ್ಷದ ಹೆಣ್ಣು ಮಗು ಕಳ್ಳತನವಾಗಿತ್ತು. ಈ ಪ್ರಕರಣ ನಂಜನಗೂಡು ಪೊಲೀಸರಿಗೆ ಅಗ್ನಿಪರೀಕ್ಷೆಯಾಗಿತ್ತು ನಂಜನಗೂಡಿನ ಡಿವೈಎಸ್ಪಿ ಪ್ರಭಾಕರ್ ರಾವ್ ಸಿಂದೆ ವೃತ್ತನಿರೀಕ್ಷಕ ಲಕ್ಷ್ಮಿಕಾಂತ ತಳವಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಯಶಸ್ವಿಯಾಗಿದೆ. ಹುಣಸೇಕುಪ್ಪೆ ಗ್ರಾಮದ ನಿವಾಸಿ 45 ವರ್ಷದ ಗಂಗರಾಜು ಎಂಬಾತ ಮಗುವನ್ನು ಕದ್ದು ಪರಾರಿಯಾಗಿದ್ದ, ಪೋಲಿಸರ ಕಾರ್ಯಾಚರಣೆಯಲ್ಲಿ ಮಗು ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಹುಣಸೆ ಕುಪ್ಪೆ ಗ್ರಾಮದಲ್ಲಿ ಪತ್ತೆಯಾಗಿದೆ.ಇನ್ನೂ ಆರೋಪಿಯನ್ನು ಪೋಲಿಸರು ವಶಕ್ಕೆ ಪಡೆದು ವಿಚಾರಿಸಿದಾಗ ನಂಜುಂಡೇಶ್ವರನ ದೇವಾಲಯದಲ್ಲಿ ಮಗು ಕದ್ದಿರುವುದು ನಿಜ,ನನ್ನ ಮಗಳ ಮನ ತೃಪ್ತಿಗಾಗಿ ನಾನು ಮಗು ಕದ್ದಿರುವೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಗಂಗರಾಜು ಎಂಬಾತನಿಗೆ ಒಬ್ಬಳೇ ಮಗಳು ಇದ್ದಳು ಆಕೆಗೆ ವಿವಾಹವಾಗಿದ್ದು ಸುಮಾರು 3-4 ನಾಲ್ಕು ವರ್ಷ ಕಳೆದರು ಮಕ್ಕಳ ಭಾಗ್ಯ ಇರಲಿಲ್ಲ,ಇದರಿಂದ ನನ್ನ ಮಗಳು ತುಂಬಾ ನೋವು ಅನುಭವಿಸಿದ್ದಳು ನನ್ನ ಮಗಳ ಮನ ತೃಪ್ತಿಗಾಗಿ ನಾನು ಮಗು ಕದ್ದಿರುವುದು ನಿಜ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಇನ್ನೂ ಕಳುವಾಗಿದ್ದ ಮಗುವನ್ನು ಈಗ ಮೈಸೂರಿನ ಬಾಲಮಂದಿರದಲ್ಲಿ ಪೋಷಿಸಲಾಗುತ್ತಿದೆ ಕೌನ್ಸಿಲಿಂಗ್ ಮಾಡಿದ ನಂತರ ಮಗುವನ್ನು ತಾಯಿಗೆ ತಲುಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಆರೋಪಿಯನ್ನು ನಂಜನಗೂಡಿನ ಪೊಲೀಸರು ವಿಚಾರಣೆ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು,ಮಗು ಕಳುವಾದ ಮೂರೇ ದಿನದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ ನಂಜನಗೂಡಿನ ಪೊಲೀಸರಿಗೆ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಹ್ಯಾಟ್ಸಪ್ ಹೇಳಿದ್ದಾರೆ.

ವರದಿ-ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು

Click to comment

Trending

Exit mobile version