ಸಿಂಧನೂರು

ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ..!

Published

on

ಸಿಂಧನೂರು: ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ ಮಾಡಿದರು.ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ಸಂಯೋಜಿತ ಭಾರತೀಯ ಮಜ್ದೂರ್ ವತಿಯಿಂದ ನಗರದ ತಹಶಿಲ್ದಾರ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಡಿದ ಎಫ್.ಎ.ಹಣಗಿ ಯವರು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ವೇತನ ಕಡಿಮೆ ಜೀವನೋಪಾಯಕ್ಕಾಗಿ ಸಾಲುವುದಿಲ್ಲ. ಮಹಿಳಾ ಸಿಬ್ಬಂದಿ ಗಳಿಗೆ ಕುಟುಂಬ ಶಸ್ತ್ರ ಚಿಕಿತ್ಸೆ ರಜೆ ಇಲ್ಲ. ವಿಮಾ ಸೌಲಭ್ಯವಿಲ್ಲ. ಜೊತೆಗೆ ಯಾವುದೇ ಬ್ಯಾಂಕುಗಳಲ್ಲಿ ಸಾಲ ದೊರೆಯುವುದಿಲ್ಲ. ವರ್ಗಾವಣೆ ಇಲ್ಲ. ಪದೋನ್ನತಿ ಇಲ್ಲ.ನಾವು ಸರ್ಕಾರಕ್ಕೆ ಹತ್ತು ಹಲವು ಬಾರಿ ನಮ್ಮ ಬೇಡಿಕೆ ಈಡೇರಿಸಲು ಒತ್ತಾಯಿಸಿದರು ಸರಕಾರ ಮಾತ್ರ ನಿರ್ಲಕ್ಷ್ಯ ವಹಿಸುತ್ತದೆ.ಕೂಡಲೇ ಸೇವಾ ಭದ್ರತೆ ಕಲ್ಪಿಸಿ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ಖಾಯಂ ಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ನಂತರ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.ಈ ಸಂಧರ್ಭದಲ್ಲಿ ತ್ರಿವೇಣಿ, ಚೆನ್ನಬಸವ, ಹನುಮಂತ, ಈರಣ್ಣ, ಓಂಪ್ರಸಾದ, ಹಮೀದ, ನಿಸಾರ, ಸುವರ್ಣ, ಮುತ್ತಮ್ಮ,ರೇಣುಕಾ, ದೇವಣ್ಣ, ಹುಚ್ಚರೆಡ್ಡಿ ಸೇರಿದಂತೆ ಸಾರ್ವಜನಿಕ ಆಸ್ಪತ್ರೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಹಾಜರಿದ್ದರು.

ವರದಿ- ಸೈಯದ್ ಬಂಧೇನವಾಜ್ ಎಕ್ಸ್ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version