ಮೈಸೂರು

ನಂಜನಗೂಡು ದೇವಾಲಯಕ್ಕೆ ನೂತನ ಡಿಸಿ ರೋಹಿಣಿ ಸಿಂಧೂರಿ ಭೇಟಿ..!

Published

on

ಮೈಸೂರು: ನಂಜುಂಡೇಶ್ವರನ ದೇವಾಲಯದ ಒಳಭಾಗದಲ್ಲಿ ಶುದ್ಧ ಬಾವಿ ನೀರಿನ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಅರ್ಚಕರಿಂದ ಮನವಿದೇವಾಲಯದ ಒಳಾಂಗಣದ ಬಿಲ್ವಪತ್ರ ಮರದ ಸಮೀಪ ಬಾವಿ ನೀರಿನ ವ್ಯವಸ್ಥೆಗೆ ನಿರ್ಧಾರಬೇಸಿಗೆ ಸಂದರ್ಭ ಬಂದರೆ ಕಪಿಲಾ ನದಿಯಲ್ಲಿ ನೀರು ತುಂಬಾ ಕಲುಷಿತವಾಗುತ್ತದೆಆ ಕಲುಷಿತ ನೀರು ದೇವರ ಅಭಿಷೇಕಕ್ಕೆ ಮತ್ತು ಕೆಲಸಕಾರ್ಯಗಳಿಗೆ ಬಳಸುವುದು ಶೋಭೆಯಲ್ಲ ಎಂದು ದೇವಾಲಯದ ಅರ್ಚಕರು ಮೌಖಿಕವಾಗಿ ಡಿಸಿ ಅವರ ಬಳಿ ಸಮಸ್ಯೆ ತಿಳಿಸಿದರುತಕ್ಷಣ ಗೋಪುರದ ಬಳಿ ಸ್ಥಳ ಪರಿಶೀಲನೆ ಮಾಡಿ ಪುರಾತತ್ವ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ವ್ಯವಸ್ಥೆಗೆ ಮುಂದಾಗುತ್ತೇನೆ ಎಂದು ಡಿಸಿ ಭರವಸೆ ಕಪಿಲಾನದಿಯ ಸ್ವಚ್ಛತೆಯ ಬಗ್ಗೆ ಅಧಿಕಾರಿಗಳಿಗೆ ಅರಿವು ಮೂಡಿಸಿದ ಡಿಸಿ ನಿನ್ನೆ ನಂಜುಂಡೇಶ್ವರನ ದೇವಾಲಯದಲ್ಲಿ ಸಂಕಷ್ಟ ನಿವಾರಣೆಗೆ ಪೂಜೆ ಸಲ್ಲಿಸಿದ ಬಳಿಕ ಅಧಿಕಾರಿಗಳ ಜೊತೆ ವಿವಿಧ ಕಡೆ ಭೇಟಿ ನೀಡಿ ಪರಿಶೀಲನೆ ನಂಜುಂಡೇಶ್ವರನ ದೇವಾಲಯದ ಕಪಿಲಾ ನದಿಗೆ ಸಹಸ್ರಾರು ಭಕ್ತರು ಆಗಮಿಸುತ್ತಾರೆ ಯಾವುದೇ ಕುಂದುಕೊರತೆಗಳು ಇಲ್ಲದ ಹಾಗೆ ಅಭಿವೃದ್ಧಿ ಮಾಡಬೇಕು ಈಗಾಗಲೇ ದೇವಾಲಯದ ಹುಂಡಿಯಲ್ಲಿ ಸಾಕಷ್ಟು ಹಣ ಇದೆ ದೇವರು ಮೆಚ್ಚುವ ರೀತಿ ಕಾನೂನುಬದ್ಧವಾಗಿ ದೇವಾಲಯದ ಅಭಿವೃದ್ಧಿ ಪಡಿಸುವುದು ಅಧಿಕಾರಿಗಳ ಕರ್ತವ್ಯ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರಯ್ಯ ರವರಿಗೆ ಡಿಸಿ ಸೂಚನೆ ನಂತರ ಮಿನಿವಿಧಾನಸೌಧದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಅಧಿಕಾರಿಗಳ ಸಭೆತಹಸೀಲ್ದಾರ್ ಕಚೇರಿಯ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಮಾತ್ರ ಸಭೆಗೆ ಆಹ್ವಾನ ತಹಸೀಲ್ದಾರ್ ಕಚೇರಿಗೆ ರೈತರು ಮತ್ತು ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ದಿನನಿತ್ಯ ಬರುತ್ತಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಾಳ್ಮೆಯಿಂದ ಅವರ ಸಮಸ್ಯೆಯನ್ನು ಕೇಳಿ ಪರಿಹಾರ ಸೂಚಿಸಬೇಕು ರೈತರು ಮತ್ತು ಸಾರ್ವಜನಿಕರ ಸೇವೆ ಮಾಡುವ ಸಲುವಾಗಿ ನಾವು ಅಧಿಕಾರಿಗಳಾಗಿ ಬಂದಿದ್ದೇವೆ. ತಾಲೂಕಿನ ಕೇಂದ್ರ ಸ್ಥಾನಕ್ಕೆ ದೂರದ ಊರುಗಳಿಂದ ತಮ್ಮ ಕೆಲಸ ಮಾಡಿಸಿಕೊಳ್ಳಲು ಆಗಮಿಸುತ್ತಾರೆ. ಎಲ್ಲವನ್ನು ತಿಳಿದು ನಾವು ಸಹನೆಯಿಂದ ಕಾನೂನುಬದ್ಧವಾಗಿ ಕೆಲಸ ಕಾರ್ಯನಿರ್ವಹಿಸಬೇಕು ಯಾರು ರೈತರ ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಬೇಜಾಬ್ದಾರಿಯಿಂದ ನಿರ್ಲಕ್ಷಿಸುತ್ತಾರೆ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಬೇಕಾಗುತ್ತದೆ ಎಂದು ಡಿಸಿ ಎಚ್ಚರಿಸಿದರು. ಸಂದರ್ಭದಲ್ಲಿ ನಂಜನಗೂಡಿನ ತಹಸೀಲ್ದಾರ್ ಮಹೇಶ್ ಕುಮಾರ್ ಉಪತಹಶೀಲ್ದಾರ್ ಶಿವಪ್ರಸಾದ್ ಸಿಬ್ಬಂದಿಗಳು ಹಾಜರಿದ್ದರು.

ವರದಿ-ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು

Click to comment

Trending

Exit mobile version