ಬೆಂಗಳೂರು

ಕೊರೊನಾ ಟೆಸ್ಟ್ ಒಪ್ಪದಿದ್ರೆ, ಕಠಿಣ ಕ್ರಮ ಗ್ಯಾರೆಂಟಿ..!

Published

on

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಇದೀಗ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ರಾಜ್ಯದಲ್ಲಿ ದಿನಕ್ಕೆ ಸಾವಿರಾರು ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಕೊರೊನಾ ಸೋಂಕಿನ ಟೆಸ್ಟ್ಗೆ ಒಪ್ಪದಿದ್ರೆ, ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ :
ಸೋಂಕಿತರ ಜೊತೆ ಸಂಪರ್ಕ ಹೊಂದಿದ್ದವರಿಗೂ ಟೆಸ್ಟ್ ಕಡ್ಡಾಯ
ರೋಗದ ಲಕ್ಷಣಗಳು ILI, SARI ಕಂಡು ಬಂದರು ಟೆಸ್ಟ್ ಮಾಡಿಸಲೇಬೇಕು
ಟೆಸ್ಟ್ ಮಾಡಿಸಲು ಒಪ್ಪದಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ
50 ಸಾವಿರ ದಂಡ ಹಾಗು 3 ವರ್ಷದ ವರೆಗೆ ಜೈಲು ಸಾಧ್ಯತೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version