Uncategorized

ಮೋದಿ ಸರ್ಕಾರ ಕಾಂಗ್ರೆಸ್ ಪಕ್ಷವನ್ನು ಕುಗ್ಗಿಸುವ ಕೆಲಸ ಮಾಡ್ತಾಯಿದೆ,ನಮ್ಮ ಪಕ್ಷ ಇಂತಹ ದಾಳಿಗೆ ಜಗ್ಗುವುದಿಲ್ಲ- ಪಿ.ಎಂ.ನರೇಂದ್ರಸ್ವಾಮಿ..!

Published

on

ಮಳವಳ್ಳಿ: ಕೇಂದ್ರದ ಮೋದಿ ಸರ್ಕಾರ ಕಾಂಗ್ರೆಸ್ ಪಕ್ಷ ಹಾಗೂ ಡಿ.ಕೆ.ಶಿವಕುಮಾರ ಅವರ ಬೆಳವಣಿಗೆ ಸಹಿಸಲಾಗದೆ ಸಿಬಿಐ ಮೂಲಕ ಶಕ್ತಿ ಕುಗ್ಗಿಸುವ ಕೆಲಸ ಮಾಡುತ್ತಿದೆ. ಆದರೆ ಇಂತಹ ಯಾವುದೇ ದಾಳಿಗೆ ಪಕ್ಷ ಮತ್ತು ಅವರು ಜಗ್ಗುವುದಿಲ್ಲ ಎಂದು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ತಾಲ್ಲೂಕು ಪಂಚಾಯಿತಿಯ ನೂತನ ಅಧ್ಯಕ್ಷ ಪುಟ್ಟಸ್ವಾಮಿ ಅವರನ್ನು ಅಭಿನಂದಿಸಿ ಅವರು ಸುದ್ದಿಗೋಷ್ಠಿ ನಡೆಸಿದರು. ಸದ್ಯ ರಾಜ್ಯದ ಎರಡು ಕಡೆ ಉಪಚುನಾವಣೆ ನಡೆಯುತ್ತಿದ್ದು,ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರಚಾರ, ಅವರ ಕಾರ್ಯತಂತ್ರ ನೋಡಿ ಬಿಜೆಪಿ ಇಂತಹ ಕೆಲಸಕ್ಕೆ ಕೈ ಹಾಕಿದೆ.ಆದರೆ ಬಿಜೆಪಿ ನೇರ ಹೋರಾಟ ಮಾಡದೆ ಇಂತಹ ಹೀನ ಕೆಲಸಕ್ಕೆ ಕೈ ಹಾಕಿರುವುದು ದುರದೃಷ್ಟಕರ. ಬಿಜೆಪಿಯು ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐಯನ್ನು ಬಳಿಸಿಕೊಂಡು ಪಿತೂರಿ ನಡೆಸುತ್ತಿದ್ದು, ಇಂತಹ ಗೊಡ್ಡು ಬೆದರಿಕೆಗೆ ಡಿ.ಕೆ.ಶಿವಕುಮಾರ್ ಅವರು ಹಾಗೂ ಕಾಂಗ್ರೆಸ್ ಪಕ್ಷ ಎದುರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.ಇದೇ ತಿಂಗಳು 10ರಂದು ಮಂಡ್ಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರೈತ ಸಮಾವೇಶವನ್ನು ಹಮ್ಮಿಕೊಂಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ತಂದಿರುವ ಜನವಿರೋಧಿ ನೀತಿಗಳ ವಿರುದ್ದ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಯುವ ಸಮಾವೇಶದಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರ ಜತೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.ತಾ.ಪಂ.ನೂತನ ಅಧ್ಯಕ್ಷ ಪುಟ್ಟಸ್ವಾಮಿ, ತಾ.ಪಂ.ಉಪಾಧ್ಯಕ್ಷ ಸಿ.ಮಾಧು,ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತ ಕೆ.ಎಂ.ಪುಟ್ಟು, ತಾಲ್ಲೂಕು ಪಂಚಾಯಿತಿ ಸದಸ್ಯರಾದ ವಿ.ಪಿ.ನಾಗೇಶ್, ವಿಶ್ವಾಸ್,ಪುರಸಭೆ ಸದಸ್ಯರಾದ ಶಿವಕುಮಾರ್, ರಾಜಶೇಖರ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಂದರ್ ರಾಜ್, ದೇವರಾಜು, ಮುಖಂಡರಾದ ಕೆ.ಚೌಡಯ್ಯ, ಗಂಗಾರಾಜೇಅರಸ್, ರಮೇಶ್, ಬಸವರಾಜು,ಪೆಟ್ರೋಲ್ ಬಂಕ್ ಮಹದೇವು, ಟಿಎಪಿಸಿಎಂಎಸ್ ನಿರ್ದೇಶಕರಾದ ಬಸವೇಶ್, ಬಸವರಾಜು, ಲಿಂಗರಾಜು, ಚೌಡಯ್ಯ, ಕುಳ್ಳಚನ್ನಂಕಯ್ಯ ಸೇರಿದಂತೆ ಹಲವರು ಭಾಗಿಯಾಗಿದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version