Uncategorized

ಜಾಲಹಳ್ಳಿ ಗ್ರಾಮವನ್ನು ಪಟಣ್ಣ ಪಂಚಾಯಿತಿ ಹಾಗೂ ಪುರಸಭೆ ವಿರೋಧಿಸಿ ತಹಸೀಲ್ದಾರ್ ಗೆ ಮನವಿ..!

Published

on

ದೇವದುರ್ಗ: ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಅತಿ ಕಡಿಮೆ ವ್ಯವಸಾಯ ಭೂಮಿಯನ್ನು ಹೊಂದಿರುವ ಗ್ರಾಮವಾಗಿದೆ.ಈ ಗ್ರಾಮದಲ್ಲಿ ಸುಮಾರು ಹದಿಮೂರು ಸಾವಿರ ಜನ ಸಂಖ್ಯೆ ಇದ್ದು,ಇದರಲ್ಲಿ ನೂರಕ್ಕೆ 80 ರಷ್ಟು ಜನ ಕೂಲಿಯನ್ನು ನಂಬಿ ಬದುಕುತ್ತಿದ್ದಾರೆ.ರಾಜಕೀಯ ಪ್ರತಿಷ್ಟೆಗಾಗಿ ರಾಜಕರಣೀಗಳು ಜನರ ಹೊಟ್ಟೆಯ ಮೇಲೆ ಹೊಡೆಯುತ್ತಾ ಇದ್ದಾರೆ, ಗ್ರಾಮಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆಯನ್ನು ರದ್ದುಮಾಡಿ ಇಲ್ಲಿಯ ಜನರು ಗೂಳೆ ಹೋಗುವುದನ್ನು ಹೆಚ್ಚಿಸುತ್ತಿರುವುದು ಸರಿಯಾದ ಬೆಳವಣಿಗೆ ಅಲ್ಲ, ಅದಕ್ಕಾಗಿ ಜಾಲಹಳ್ಳಿ ಗ್ರಾಮವನ್ನು ಗ್ರಾಮ ಪಂಚಾಯತಿಯಾಗಿ ಮುಂದುವರಿಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.ಇನ್ನೂ ಈ ಸಂದರ್ಭದಲ್ಲಿ ಬಸವರಾಜ ನಾಯಕ ಜಾಲಹಳ್ಳಿ ನಂದಪ್ಪ ಲಿಂಗದಹಳ್ಳಿ ಮೌನೇಶ ದಾಸರ್ ಬಸವ ವಂದಲಿ ಮಲ್ಲು ಚಿಂತಲಕುಂಟಿ ರಮೇಶ್ ಬಾವಿಮನಿ ತಿಮ್ಮಣ್ಣ ಗೋಸಲ ಮಂಜುನಾಥ ವಠಾರ ಹನುಮಂತ ಗಣೇಕಲ್ ದುರುಗಪ್ಪ ವರಟಿ ವೆಂಕಟೇಶ್ ದಾಯಿ ಮಲ್ಲೇಶ್ ಕರಿಗೂಳಿ ತಮ್ಮಣ ಸುರೇಶ್ ರಂಜಪ್ಪ ಹಂಪರಗುಂದಿ ಸುರೇಶ್ ಹಂಪರಗುಂದಿ ಮುಕ್ತ ಪಾಷಾ ಬಸಪ್ಪ ತವಗ ರಂಗನಾಥ್ ಬುಂಕಲದೊಡ್ಡಿ ಮತ್ತಿತರು ಉಪಸ್ಥೀತರಿದ್ದರು.

ವರದಿ- ಸುರೇಶ್ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ

Click to comment

Trending

Exit mobile version