ಕಲಬುರಗಿ

ಶಾಲೆ ಆರಂಭಿಸುವ ಗೊಂದಲದ ಬೆನ್ನಲ್ಲೇ ಐದು ಮಕ್ಕಳಿಗೆ ಸೋಂಕು ದೃಡ..!

Published

on

ಕಲಬುರಗಿ: ಕಲಬುರುಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ವಠಾರ್ ಶಾಲೆಗೆ ಕೊರಾನಾ ಆತಂಕ ಸೃಷ್ಟಿಯಾಗಿದೆ. ಮಾಶಾಳ ಸರಕಾರಿ ಶಾಲೆಯ 4 ಮಕ್ಕಳಿಗೆ ಕೊರಾನಾ ಪಾಸಿಟಿವ್ ದೃಡಪಟ್ಟಿದ್ದು, ಇನ್ನುಳಿದ ಐದು ಶಾಲೆಗಳನ್ನು ಸಂಪೂರ್ಣವಾಗಿ ಶೀಲ್ ಡೌನ್ ಮಾಡಲಾಗಿದೆ. ಶಾಲೆಯ ಮುಖ್ಯ ಶಿಕ್ಷಕರಿಗೆ ಕೊರೊನಾ ಪಾಸೀಟಿವ್ ಬಂದ ಹಿನ್ನಲೆ 2೦ ಶಿಕ್ಷಕರು ಸೇರಿದಂತೆ 208 ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. ಇದರಲ್ಲಿ 4 ಜನ ಮಕ್ಕಳಿಗೆ ಪಾಸಿಟಿವ್ ದೃಡಪಟ್ಟ ಹಿನ್ನಲೆ ಗ್ರಾಮದ ಜನ, ಪಾಲಕರು ಹಾಗೂ ಮಕ್ಕಳು ಆತಂಕದಲ್ಲಿದ್ದಾರೆ. ಇನ್ನೂ ಸರ್ಕಾರ ಶಾಲೆ ಆರಂಭ ಮಾಡುವ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಿರುವಾಗಲೇ ಇಂತಹ ಘಟನೆ ನಡೆದಿರೊದ್ರಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವ ವಿಚಾರದಲ್ಲಿ ಪೋಷಕರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.

ವರದಿ-ಈರಣ್ಣ ವಗ್ಗೆ ಎಕ್ಸ್ ಪ್ರೆಸ್ ಟಿವಿ ಅಫಜಲಪುರ

Click to comment

Trending

Exit mobile version