Uncategorized

ಅರಸೀಕಟ್ಟೆ ಅಮ್ಮ ದೇವಸ್ಥಾನದ ಬಳಿ ದೋಣಿ ವಿಹಾರ ಸೌಲಭ್ಯ ಉದ್ಘಾಟಿಸಿದ ಶಾಸಕ ಎ.ಟಿ. ರಾಮಸ್ವಾಮಿ

Published

on

ಅರಕಲಗೂಡು: ಬಹು ನಿರೀಕ್ಷಿತ ತಾಲೂಕಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಅರಸೀಕಟ್ಟೆ ಅಮ್ಮದೇವಸ್ಥಾನ ಸನ್ನಿಧಿಯಲ್ಲಿ ಇಂದು ಬಹು ದೋಣಿ ವಿಹಾರಕ್ಕೆ ಚಾಲನೆ ನೀಡಿದ ಶಾಸಕ ಎ.ಟಿ. ರಾಮಸ್ವಾಮಿ ಅವರು ೩.೬ ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.ನಂತರ ನಡೆದ ವೇದಿಕೆ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಎಲ್ಲ ಹಂತದಲ್ಲೂ ನೈತಿಕತೆ ಕುಸಿಯುತ್ತಿದೆ.ನೈತಿಕತೆ ಸುಧಾರಣೆಗಾಗಿ ಇಂಥ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿ ಮಾನವೀಯ ಮೌಲ್ಯಗಳನ್ನು ಬಿತ್ತಬೇಕಿದೆ. ಈ ನಿಟ್ಟಿನಲ್ಲಿ ಕ್ಷೇತ್ರಕ್ಕೆ ಬರುವ ಭಕ್ತರಿಗಾಗಿ ಇಲ್ಲಿ ಆಕರ್ಷಣೆ ಹೆಚ್ಚಿಸಲು ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ ಮೊದಲ ಬಾರಿಗೆ ದೋಣಿ ವಿಹಾರಕ್ಕೆ ಚಾಲನೆ ನೀಡುತ್ತಿರುವುದು ಸಂತೋಷವಾಗುತ್ತಿದೆ ಎಂದರು.ಮುಖ್ಯವಾಗಿ ಇಲ್ಲಿ ಭಕ್ತರ ಅನುಕೂಲಕ್ಕಾಗಿ ಹಲವಾರು ಸೌಲಭ್ಯಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಭಕ್ತರು ಸದುಪಯೋಗ ಹೊಂದುವಂತೆ ಮನವಿ ಮಾಡಿದರು.ಅರಸೀಕಟ್ಟೆಯಮ್ಮ ದೇವಾಲಯದ ಅವರಣದಲ್ಲಿ ಭಕ್ತರ ಮತ್ತು ಸಾರ್ವಜನಿಕರ ಸೌಲಭ್ಯಕ್ಕಾಗಿ ನೂತನವಾಗಿ ನಿರ್ಮಿಸಿರುವ ಎಡೆಪೀಠ,ಸಾಲು ಅಂಗಡಿ ಮಳಿಗೆಗಳು,ಕೆರೆಯಲ್ಲಿ ದೋಣಿವಿಹಾರ,ಕಚೇರಿ ಕಟ್ಟಡ, ಅಪರೂಪದ ನಕ್ಷತ್ರವನ , ನವಗ್ರಹವನ , ನವೀಕೃತ ಹೇಮಾವತಿ, ಕಾವೇರಿ ಅಡುಗೆ ಮತ್ತು ಊಟದ ಮನೆಗಳ ಉದ್ಘಾಟನೆ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ೧ ಕೋಟಿ ರೂ ವೆಚ್ಚದಲ್ಲಿ ಕಾಟೇಜ್ ಗಳು, ಹೈಟೆಕ್ ಶೌಚಗೃಹಗಳ ನಿರ್ಮಾಣಕ್ಕೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದರು.ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ತಾಪಂ ಇಒ ರವಿಕುಮಾರ್, ನೀರಾವರಿ ಇಲಾಖೆ ಇಂಜಿನಿಯರ್ ಗಳು, ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಇದ್ದರು

ವರದಿ-ಸಣತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು

Click to comment

Trending

Exit mobile version