ಸಿಂಧನೂರು

ಕ್ಷೇತ್ರದಲ್ಲಿ ನಡೆದ ಕಾಮಗಾರಿಗಳನ್ನು ತನಿಖೆ ಮಾಡವಂತೆ ಒತ್ತಾಯಿಸಿ ಪ್ರತಿಭಟನೆ…!

Published

on

ಸಿಂಧನೂರು: ನಗರದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನಿವಾಸದಿಂದ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ತಹಶಿಲ್ದಾರ್ ಕಛೇರಿಯವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಉದ್ದಕ್ಕೂ ಕೆಂದ್ರ ಹಾಗೂ ರಾಜ್ಯದ ಸರ್ಕಾರದ ಜೊತೆಗೆ ಶಾಸಕ ವೆಂಕಟರಾವ್ ನಾಡಗೌಡ ರವರ ದುರಾಡಾಳಿತದ ವಿರುದ್ಧ ಘೋಷಣೆ ಕೂಗಿದರು. ಈ ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಪಂಚಾಯತ ಸದಸ್ಯ ಬಸವರಾಜ ಹಿರೇಗೌಡ ಮಾತನಾಡಿ ಉತ್ತರ ಪ್ರದೇಶದ ಹತ್ರಾಸ್ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು.ಬಿಜೆಪಿಯವರು ಕೇವಲ ಪ್ರಚಾರ ಪ್ರಿಯರು ಮಾತ್ರ ಇವರ 7 ವರ್ಷದ ಆಡಳಿತದ ಅವಧಿಯಲ್ಲಿ ಕೇವಲ ಕಾರ್ಪೊರೇಟ್ ಪರ ಕಾಯ್ದೆಗಳನ್ನು ಜಾರಿಗೆ ಮಾಡುತ್ತಾ ರೈತಾಪಿ ವರ್ಗ, ಕಾರ್ಮಿಕ ವರ್ಗ, ಸೇರಿದಂತೆ ಜನ ಸಾಮಾನ್ಯರ ಬದುಕು ಬಿದಿಗೆ ತಂದಿದ್ದಾರೆ. ಉತ್ತರ ಪ್ರದೇಶದ ಹತ್ರಾಸ್ ಗ್ರಾಮದಲ್ಲಿ ನಡೆದ ಅತ್ಯಾಚಾರ 7 ದಿನಗಳ ನಂತರ ಪ್ರಕರಣ ದಾಖಲೆಯಾಗಿದೆ. ನೊಂದ ಕುಟುಂಬಕ್ಕೆಸಾಂತ್ವನ ಹೇಳಲು ತೆರಳಿದ್ದ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಮೇಲೆ ಪೊಲೀಸರ ದೌರ್ಜನ್ಯ ಮಾಡಿದು ಖಂಡನಿಯ. ಬಿಜೆಪಿ ಪಕ್ಷದ ಪ್ರಕಾರ ನೊಂದ ಕುಟುಂಬದ ಪರವಾಗಿ ಯಾರು ನ್ಯಾಯ ಕೇಳಬಾರದಾ, ಪ್ರತಿಭಟನೆ ಮಾಡಬಾರದ,ಯಾಕೆ ಆತ್ಯಾಚಾರ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ ಎಂದು ಕಿಡಿಕಾರಿದರು.ಈ ಸಂಧರ್ಭದಲ್ಲಿ ಪಂಪನಗೌಡ ಬಾದರ್ಲಿ, ಹೆಚ್.ಎನ್.ಬಡಿಗೇರ, ಖಾಜ ಮಲ್ಲಿಕ್, ಅನಿಲ್ ಕುಮಾರ್, ಅಮರೇಶ್ ಗುರಿಕಾರ,ಶ್ರೀನಿವಾಸ ರೆಡ್ಡಿ,ಮಾಲಿ ಪಾಟೀಲ್, ರಮೇಶ್ ನಾಯಕ ವಕೀಲರು, ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದರು.

ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version