Uncategorized

ಐತಿಹಾಸಿಕ ಮಸ್ಕಿ ತಾಲೂಕಿಗೆ ಮತ್ತೊಂದು ಗರಿ- ಇತಿಹಾಸ ಪ್ರಸಿದ್ಧ ರಾಜಮನೆತನದ ಕುರುಹು ಪತ್ತೆ..!

Published

on

ಮಸ್ಕಿ : ಪಾಮನಕೆಲ್ಲೂರು ಹೋಬಳಿ ವ್ಯಾಪ್ತಿಯ ಕಾಚಾಪುರ ಗ್ರಾಮದಲ್ಲಿ ಪುರಾತನ ಅವಶೇಷಗಳನ್ನು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ . ಚನ್ನಬಸಪ್ಪ ಮಲ್ಕಂದಿನ್ನಿಯವರು ಶೋಧಿಸಿದ್ದಾರೆ.ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗ್ರಾಮದಲ್ಲಿರುವ ಹಳೆಯ ಊರಲ್ಲಿ ನವಶಿಲಾಯುಗ ಕಾಲದ ಕೊಡಲಿಗಳು , ಸೂರ್ಯ ವಿಗ್ರಹ , ಕಲ್ಯಾಣ ಚಾಳುಕ್ಯರ ಸ್ತಂಬಗಳು ಸೇರಿದಂತೆ ಇನ್ನೀತರ ಪುರಾತನ ವಸ್ತುಗಳು ಪತ್ತೆಯಾಗಿವೆ.ಪುರಾತತ್ವ ಇಲಾಖೆಗೆ ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ಇದೆ. ಉದಯಕುಮಾರ ವಾರ್ಡನ್ , ಅಶೋಕ ನಾಯಕ ದಿದ್ದಿಗಿ, ಮಂಜುನಾಥ ಸಾಹುಕಾರಮನಿ , ಭೀಮಣ್ಣ ನಾಯಕ ಕಾಚಾಪೂರ , ಹುಚ್ಚರಡ್ಡಿ , ಹನುಮಂತ, ಎಂಬುವವರಿಗೆ ಕುರುಹುಗಳು ಮೊದಲು ಪತ್ತೆಯಾಗಿದೆ ತದ ನಂತರ ಸಂಶೋಧಕರಿಗೆ ವಿಷಯ ಮುಟ್ಟಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಎಲ್ಲಾ ಕುರುಹುಗಳನ್ನು ಪರಿಶೀಲಿಸುತ್ತಿದ್ದಾರೆ.

ವರದಿ-ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು.

Click to comment

Trending

Exit mobile version