ಮಂಡ್ಯ

ಪತ್ನಿ ನೆನಪಿಗೆ ಸರ್ಕಾರಿ ಶಾಲೆ ದತ್ತು ಪಡೆದ ಶಿಕ್ಷಕ ಸಂಘದ ಅಧ್ಯಕ್ಷ..!

Published

on

ಮಳವಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಮುಚ್ಚಿದ ಸರ್ಕಾರಿ ಶಾಲೆ ಪ್ರಾರಂಭ ಉತ್ಸವದ ಪ್ರಯುಕ್ತ ಮಕ್ಕಳಿಗೆ ಸಮವಸ್ತ್ರ ಬ್ಯಾಗ್ ,ನೋಟ್ ಬುಕ್ ವಿತರಣಾ ಕಾರ್ಯಕ್ರಮ ಮಳವಳ್ಳಿ ತಾಲ್ಲೂಕಿನ ಹುಚ್ಚನದೊಡ್ಡಿ ಗ್ರಾಮದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ತಾ.ಪ ಮಾಜಿ ಅದ್ಯಕ್ಷ ಹಾಗೂ ಹಾಲಿಸದಸ್ಯ.ವಿಶ್ವಾಸ್ ರವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಶಾಲೆಗೆ ತನ್ನ ಕೈಲದಷ್ಟು ಅನುದಾನವನ್ನು ಕೊಟ್ಟು ಶಾಲೆಯನ್ನು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು. ಇದೇ ವೇಳೆ ಸರ್ಕಾರಿ ನೌಕರರ ಸಂಘದ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಮಹದೇವಯ್ಯ ಅಲಿಯಾಸ್ ಮಧುರವರು ತಮ್ಮ ಪತ್ನಿ ಶಿಕ್ಷಕಿ ಜಯಶ್ರೀ ಅವರ ನೆನಪಿಗಾಗಿ ಶಾಲೆಯನ್ನು ದತ್ತು ತೆಗೆದುಕೊಂಡು ಶಾಲಾ ಮಕ್ಕಳಿಗೆ ಬ್ಯಾಗ್, ಸಮವಸ್ತ್ರ ,ನೋಟ್ ಬುಕ್ ,ಶೂ ಸಹ ವಿತರಣೆ ಮಾಡಿದರು. ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಮಾತನಾಡಿ, ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಬೇಕಾದರೆ ವಿದ್ಯಾಭ್ಯಾಸ ಮುಖ್ಯ,ಪ್ರತಿಯೊಬ್ಬರು ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಸೇವೆ ಮಾಡಲು ಅವಕಾಶ ಸಿಗುತ್ತದೆ. ಭೂಮಿ ಮೇಲೆ ಎಷ್ಟು ದಿನ ಇರುತ್ತವೆಯೋ ಗೊತ್ತಿಲ್ಲ,ಇರುವಷ್ಟು ದಿನ ನಮ್ಮನ್ನು ನೆನೆಪು ಮಾಡಿಕೊಳ್ಳುವ ಉತ್ತಮ ಹಾಗೂ ಒಳ್ಳೆಯ ಕೆಲಸವನ್ನು ಮಾಡಬೇಕು ಎಂದರು.ಇನ್ನೂ ಕಾರ್ಯಕ್ರಮದಲ್ಲಿ ಕ್ಷೇತ್ರ ಸಮಾನ್ವಯಾಧಿಕಾರಿ ಯೋಗೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಯಪ್ರಕಾಶ್, ಸೇರಿದಂತೆ ಮತ್ತಿತರು ಉಪಸ್ಥೀತರಿದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version