Uncategorized

ನಗರಸಭಾ ಅಧಿಕಾರದ ಗದ್ದುಗೆಗೆ ಪೈಪೋಟಿ ಶುರು..!

Published

on

ನಂಜನಗೂಡು: ನಂಜನಗೂಡು ನಗರಸಭಾ ಅಧಿಕಾರದ ಗದ್ದುಗೆಗೆ ಪೈಪೋಟಿ ಶುರುವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಪುರುಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆಸಾಮಾನ್ಯ ಮಹಿಳೆಗೆ ಮೀಸಲಾತಿ ಪ್ರಕಟವಾಗಿದೆ. ಇದರ ಹಿನ್ನೆಲೆ ನಗರಸಭೆ ಅಧಿಕಾರದ ಗದ್ದುಗೆಗಾಗಿ ಸದಸ್ಯರು ಪೈಪೋಟಿಗೆ ನಿಂತಿದೆ. ನಂಜನಗೂಡು ನಗರಸಭೆ ಒಟ್ಟು 31 ಸದಸ್ಯರ ಬಲವನ್ನು ಹೊಂದಿದ್ದು, ಬಿಜೆಪಿಯ 15 ಸದಸ್ಯರು, ಗೆಲುವು ಸಾಧಿಸಿ ಸಂಸದರು ಮತ್ತು ಶಾಸಕರ ಬೆಂಬಲದಿಂದ, ಕುರ್ಚಿಗಾಗಿ ನಾಮುಂದು ತಾಮುಂದು ಎಂದು ಪೈಪೋಟಿ ಪ್ರಾರಂಭವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ 10 , ಜೆಡಿಎಸ್ 3, ಪಕ್ಷೇತರ 3 ಸದಸ್ಯರು ಗೆಲುವು ಸಾಧಿಸಿದ್ದಾರೆ. ಈ ಬಾರಿ ನಂಜನಗೂಡು ನಗರಸಭೆ ಅಧಿಕಾರದ ಚುಕ್ಕಾಣಿ ಬಿಜೆಪಿ ವಶವಾಗುವುದು ಖಚಿತವಾಗಿದ್ದು, ಪಕ್ಷದ ಸದಸ್ಯರಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕುರ್ಚಿಗಾಗಿ ಜುಗಲ್ ಬಂದಿ ಏರ್ಪಟ್ಟಿದೆ. ಬಹುಮತಗಳಿಸಿ ನಗರಸಭಾ ಅಧಿಕಾರವನ್ನು ವಶಕ್ಕೆ ಪಡೆಯಲು ಬಿಜೆಪಿ ಪಕ್ಷದ ಸದಸ್ಯರನ್ನು ಸಂಸದ ವಿ ಶ್ರೀನಿವಾಸ್ ಪ್ರಸಾದ್, ಶಾಸಕ ಹರ್ಷವರ್ಧನ್, ಯಾವ ರೀತಿ ಮನವೊಲಿಸುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಐದು ವರ್ಷಗಳ ಅವಧಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಧಿಕಾರದ ಅವಧಿಯನ್ನು ಹಂಚಿಕೆ ಮಾಡಿ ಅಧಿಕಾರವನ್ನು ಯಾರ ಮುಡಿಗೆ ನೀಡುತ್ತಾರೆ ಎಂಬುದು ಈಗಾಗಲೇ ಚರ್ಚೆಗೆ ಗ್ರಾಸವಾಗಿದೆ.

ವರದಿ-ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು

Click to comment

Trending

Exit mobile version