ತಿಪಟೂರು

ಪಾದಚಾರಿ ರಸ್ತೆಯ ಅಂಗಡಿಗಳ ತೆರವು ಕಾರ್ಯಾಚರಣೆ..!

Published

on

ತಿಪಟೂರು: ತಿಪಟೂರು ನಗರದ ದೊಡ್ಡಪೇಟೆ ಹಾಗೂ ಎಲೆ ಆಸರ ರಸ್ತೆಯ ಫುಟ್ಪಾತ್ ಮೇಲೆ ಇಟ್ಟುಕೊಂಡಿದ್ದ ಅಂಗಡಿಗಳನ್ನು ನಗರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ಮಾಡುವ ಮೂಲಕ ತೆರವುಗೊಳಿಸಿ ವಾಹನ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ನಗರಸಭೆಯ ಈ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದು ತೆರವುಗೊಳಿಸಿದ ಸ್ಥಳವನ್ನು ಮತ್ತೆ ಅತಿಕ್ರಮಿಸದಂತೆ ಮಾಡಬೇಕು ಮತ್ತು ನಗರದ ತುಂಬೆಲ್ಲ ಇರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ವರದಿ-ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Click to comment

Trending

Exit mobile version