ರಾಯಚೂರು

ಪುಟ್ಟ ಗ್ರಾಮದ ಹುಡುಗಿಯ ದೊಡ್ಡ ಸಾಧನೆ..

Published

on

ರಾಯಾಚೂರು: ಸಾದನೆ ಎನ್ನುವದು ಸಾಧಕನ ಸೊತ್ತೇ ಹೊರೆತು ಸೊಂಬೇರಿಗಲಿಗಲ್ಲ, ಸಮಯ ಪಾಲನೆ ಮಾಡುತ್ತಾ ಸೂಕ್ತ ರೀತಿಯಲ್ಲಿ ಓದುವ ಮೂಲಕ ಮಾನವಿ ತಾಲ್ಲೂಕಿಗೆ SSLC ಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಯಾಚೂರು ಜಿಲ್ಲೆಯ ಕವಿತಾಳ್ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಗೆ ಹೆಮ್ಮೆಯ ಗರಿ ಗಿಟ್ಟಿಸಿದ್ದಾಳೆ. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ, ಬಿಡುಗಡೆ ಮಾಡಿರುವ ಸರಕಾರಿ ಪ್ರೌಢ ಶಾಲೆ, ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ, ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಸ್ಥಾನವವನು ಅವರು ಪಡೆದಿರುವ ಗರಿಷ್ಠ ಅಂಕಗಳ ಆಧಾರದ ಮೇಲೆ ಪಟ್ಟಿಯ ಬಿಡುಗಡೆ ಮಾಡಲಾಗುತ್ತದೆ. ಅದರಲ್ಲಿ ಮಾನವಿ ತಾಲ್ಲೂಕಿನ ಬಾಲಕಿಯರ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯಾದ ಅನುಷಾ 625ಕ್ಕೆ 585 ಅಂಕ ಪಡೆಯುವ ಮೂಲಕ ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದು, ಪುಟ್ಟ ಗ್ರಾಮದ ೀ ಹುಡುಗಿಯ ಸಾಧನೆಗೆ ಎಲ್ಲರೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.ಇನ್ನೂ ವಿದ್ಯಾರ್ಥಿನಿ ಅನುಷಾ ಮಾತನಾಡಿ ಕೊರೋನ ಸಮಯದಲ್ಲಿ ವ್ಯಾಟ್ಸಪ್ ಗ್ರೋಪ್ ಮಾಡುವ ಮೂಲಕ ಶಿಕ್ಷಕರು ನಮ್ಮ ಸಮಸ್ಸೆಗಳನ್ನು ಪರಿಹರಿಸುತ್ತಿದ್ದರು. ಆನ್ಲೈನ್ ಶಿಕ್ಷಣ ತುಂಬಾ ನೆರವಾಯಿತು.ಮುಂಬರುವ ವಿದ್ಯಾರ್ಥಿಗಳು ಸಮಯ ಹಾಳು ಮಾಡದೇ ಕಷ್ಟ ಪಟ್ಟು ಓದಿದರೆ ಯಶಸ್ಸು ಖಂಡಿತಾ ಸಿಗುತ್ತೆ ಎನ್ನುವ ಮೂಲಕ ಪ್ರೇರೇಪಣೆ ನೀಡಿದ್ದಾಳೆ.

ವರದಿ-ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿ ವಿ ಸಿರವಾರ

Click to comment

Trending

Exit mobile version